ಚಳ್ಳಕೆರೆ : ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿಯವರ ಸುಪುತ್ರರಾದ ಜಿ.ಟಿ. ಶಿವಕುಮಾರ್ ರವರು ಅನಾರೋಗ್ಯ ಸಮಸ್ಯೆಯಿಂದ ಇಂದು ವಿಧಿವಶರಾಗಿರುತ್ತಾರೆ,
ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ರವರ ಮಗ ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನುವ ಮಾಹಿತಿ ಆಪ್ತ ವಲಯಗಳಿಂದ ಕೇಳಿ ಬಂದಿದೆ , ಆದರೆ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು ಫಲಕಾರಿಯಾಗದೆ ದೈವದೀನರಾಗಿದ್ದಾರೆ.
ಇನ್ನೂ ಕ್ಷೇತ್ರದ ತುಂಬೆಲ್ಲಾ ಅಪಾರ ಅಭಿಮಾನಿ ಬಳಗ ಹೊಂದಿದ ಶಿವಕುಮಾರ್ ರವರ ಸಾವು ನೋವು ತಂದಿದೆ.
ಅಪಾರ ಸಂಖ್ಯೆಯಲ್ಲಿ
ಅಭಿಮಾನಿಗಳನ್ನು ಹೊಂದಿದ ಶಿವಕುಮಾರ್ ಪಾರ್ಥಿವ ಶರೀರವನ್ನು ನೋಡಲು ಜನಸಾಗರವೇ ಹರಿದು ಬರುತ್ತಿರುವುದು ಕಾಣಬಹುದಾಗಿದೆ.