ಚಳ್ಳಕೆರೆ :
ನಗರ ಪ್ರದೇಶದಲ್ಲಿ ಮೈನಿಂಗ್ ಲೋಡಿಂಗ್ ಅನ್ ಲೋಡಿಂಗ್ ಮಾಡುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಅಪಾಯಕಾರಿ ದೂಳಿನಿಂದ ಚಿಕ್ಕ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಆದ್ದರಿಂದ ಈ ಕೂಡಲೇ ಮೈನಿಂಗ್ ಮಾಡುವುದು ನಿಲ್ಲಿಸಿ ಬೇರೆಡೆಗೆ ನಿರ್ಜನ ಪ್ರದೇಶಕ್ಕೆ ವರ್ಗಾವಣೆ ಮಾಡಿ ಎಂದು ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ಅವರು ನಗರದ ಪಾವಗಡ ರಸ್ತೆಯ ರೈಲ್ವೆ ನಿಲ್ದಾಣದ ಸಮೀಪದಲ್ಲಿ ನಾಗರೀಕರ ಹಿತಾ ರಕ್ಷಣೆ ಸಮಿತಿ, ಬಿಜೆಪಿ ಕಾರ್ಯಕರ್ತರು, ರೈತ ಸಂಘ, ಕರವೇ ಕಾರ್ಯಕರ್ತರು, ಹಾಗೂ ಲಾರಿ , ಟಿಪ್ಪರ್ ಮಾಲೀಕರ ಸಂಘದಿಂದ ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಮಾತನಾಡಿದರು,
ಮೈನಿಂಗ್ ಪಕ್ಕದಲ್ಲಿ ಶಾಲೆ, ರೈಲ್ವೆ ನಿಲ್ದಾಣ, ಸಾರ್ವಜನಿಕರ ವಸತಿ ಗೃಹಗಳು, ಸಾಯಿ ಮಂದಿರ ದೇವಾಲಯ ಈಗೇ ಜನಸಂದಣಿಯ ಪ್ರದೇಶದಲ್ಲಿ ವಿಷಯುಕ್ತ ಮೈನಿಂಗ್ ತುಂಬುವುದರಿಂದ ಅದರ ದೂಳು ಮನುಷ್ಯ ಹಾಗೂ ಪ್ರಾಣಿಗಳು ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಬೇಕಾಗುತ್ತದೆ ಇನ್ನು ಸ್ಥಳೀಯವಾಗಿ ಕಂಪನಿಗಳು ತೆರೆದಂತ ಸಂದರ್ಭದಲ್ಲಿ ಕಾನೂನು ಪಾಲಿಸಬೇಕು, ಸ್ಥಳೀಯರಿಗೆ ಆದ್ಯತೆ ನೀಡುವುದು ಕಡ್ಡಾಯವಾಗಿರುತ್ತದೆ ಅದರಂತೆ ಇಲ್ಲಿನ ಜನತೆಗೆ ಉದ್ಯೋಗ ನೀಡುವುದು ಸ್ಥಳೀಯರಿಗೆ ಅವಕಾಶ ಕೊಡುವುದು ಹೀಗೆ ಹಲವಾರು ವಿಧಾನಗಳಲ್ಲಿ ಕಂಪನಿಗಳು ತಮ್ಮ ಕಾರ್ಯವ್ಯಾಪ್ತಿ ಕೆಲಸ ನಿರ್ವಹಿಸಬೇಕಾಗುತ್ತದೆ ಆದರೆ ಇವೆಲ್ಲವುಗಳನ್ನು ಗಾಳಿಗೆ ತೂರಿ ಹೊರ ರಾಜ್ಯದ ಟಿಪ್ಪರ್ ಗಳಿಗೆ ಹಾಗೂ ಜೆಸಿಪಿಗಳಿಗೆ ಅವಕಾಶ ನೀಡಿ ಸ್ಥಳೀಯ ಟಿಪ್ಪರ್ ಮಾಲೀಕರಿಗೆ ಹಾಗೂ ಜೆಸಿಪಿಗಳಿಗೆ ಉದ್ಯೋಗ ನೀಡದೆ ಅವರ ಮಕ್ಕಳಿಗೆ ನೌಕರಿ ನೀಡದೇ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ ಎಂದರು.
ಇನ್ನು ಮೈನಿಂಗ್ ಮಾಡುವ ರೈಲ್ವೆ ಟ್ರಕ್ ನಲ್ಲಿ ಮೈನಿಂಗ್ ತರುವ ಸ್ಥಳಕ್ಕೆ ಭೇಟಿ ನೀಡಿದ ಸಂಸದರು ಸ್ಥಳವನ್ನು ಪರಿಶೀಲಿಸಿ, ರೈಲ್ವೆ ನಿಲ್ದಾಣ ಪಕ್ಕದಲ್ಲಿ ಇರುವುದರಿಂದ ಹಾಗೂ ಜನವಸತಿ ಪ್ರದೇಶ ಹಾಗೂ ಶಾಲಾ-ಕಾಲೇಜುಗಳು ಮೇಲೆ ಪರಿಣಾಮ ಬೀರುತ್ತದೆ ಈ ಕೂಡಲೇ ಇಲ್ಲಿ ನಿಂತಿರುವ ಲಾರಿಗಳು ಹಾಗೂ ಜೆಸಿಪಿಗಳನ್ನು ಸ್ಥಳಾಂತರಿಸಬೇಕು ಅತಿ ತುರ್ತಾಗಿ ಇಲ್ಲಿ ಲೋಡಿಂಗ್ ರದ್ದುಗೊಳಿಸಬೇಕು ಎಂದು ತಹಶೀಲ್ದಾರ್ ರೇಹಾನ್ ಪಾಷ ಅವರಿಗೆ ಸೂಚಿಸಿದರು..
ಇನ್ನೂ ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆಟಿ.ಕುಮಾರಸ್ವಾಮಿ ಮಾತನಾಡಿ, ಮೈನಿಂಗ್ ಲೋಡಿಂಗ್ ವಿಷಮುಕ್ತ ದೂಳಿನಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರು ಸ್ಥಳೀಯ ಶಾಸಕರು ಗಮನ ಹರಿಸದೆ ಇರುವುದು ಕಂಡುಬಂದಿದೆ, ಕಳೆದ 11 ವರ್ಷಗಳಿಂದ ಅಧಿಕಾರ ಕೊಟ್ಟ ಮತದಾರರಿಗೆ ಶಾಸಕರು ಉತ್ತರಿಸಬೇಕಾಗಿದೆ, ಮೈನಿಂಗ್ ಲೋಡಿಂಗ್ ಅನ್ ಲೋಡಿಂಗ್ ಈ ಕೂಡಲೇ ಸ್ಥಳಾಂತರ ಮಾಡಿಸಬೇಕು, ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಬೇಕು ಶಾಸಕರೆ ಜನರ ಜೀವನದ ಜೊತೆ ಚೆಲ್ಲಾಟ ಆಡುವುದು ಬಿಟ್ಟು ಜನರ ರಕ್ಷಣೆಗೆ ಮುಂದಾಗಿ ಜನರ ಆಶೀರ್ವಾದ ನಿಮ್ಮ ಮೇಲೆ ಇದ್ದ ಮೇಲೆ ಅವರ ಋಣ ತೀರಿಸಿಕೊಳ್ಳಿ ಎಂದು ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ಚಳ್ಳಕೆರೆ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ ಮಾತನಾಡಿ, ರೈಲ್ವೆ ನಿಲ್ದಾಣದಲ್ಲಿ ಮೈನಿಂಗ್ ಲೋಡಿಂಗ್ ಮಾಡುವುದು ಸರಿಯಾದ ವಿಧಾನವಲ್ಲ ಇದರಿಂದ ನಾಗರಿಕರ ಮೇಲೆ ಹಾಗೂ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಒಳಗಾಗುತ್ತಾರೆ, ಚಿಕ್ಕವಯಸ್ಸಿನಲ್ಲಿ ವಿಷಮುಕ್ತ ದೂಳಿನಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಈ ಕೂಡಲೇ ಈ ಮೈನಿಂಗ್ ಲೋಡಿಂಗ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು, ಇನ್ನು ಚಳ್ಳಕೆರೆ ತಾಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ, ನಿನ್ನೆ ತಾನೆ ನಡೆದ ಅಕ್ರಮ ಪಡಿತರ ರಾಗಿ ಪೊಲೀಸರ ವಶಕ್ಕೆ ಪಡೆದು ಕೇವಲ ಒಂದು ದಿನದಲ್ಲಿ ವಾಪಸ್ ಬಿಡುವ ಪ್ರಕರಣ ಶಾಸಕರಿಗೆ ಶೋಭೆ ತರುವಂತದ್ದಲ್ಲ, ಶಾಸಕರ ಹಿಡಿತ ತಪ್ಪಿದ ಅಧಿಕಾರಿಗಳ ಮನಸೋಇಚ್ಚೆ ದಂಡೆಯಲ್ಲಿ ತೊಡಗಿದ್ದಾರೆ.
ತಾಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ ಎಂದು ಆಕ್ರೋಶ ಹೊರ ಹಾಕಿದರು.
ಇನ್ನು ಬಿಜೆಪಿ ಮುಖಂಡ ಜಯಪಾಲಯ್ಯ ಮಾತನಾಡಿ, ರೈಲ್ವೆ ನಿಲ್ದಾಣ ಸಮೀಪ ಮೈನಿಂಗ್ ಮಾಡುವುದು ಮಕ್ಕಳ ಮೇಲೆ ವಿಪರೀತ ದುಷ್ಪರಿಣಾಮ ಬೀರುತ್ತದೆ, ಆದ್ದರಿಂದ ಮೈನಿಂಗ್ ರದ್ದುಗೊಳಿಸಬೇಕು ನಗರ ವಲಯದ ಪ್ರದೇಶಗಳಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾರಕವಾಗದ ರೀತಿಯಲ್ಲಿ ಕಂಪನಿಗಳು ಕ್ರಮವಹಿಸಿ ಮೈನಿಂಗ್ ಮಾಡಬೇಕು ಇನ್ನು ಸ್ಥಳೀಯವಾಗಿ ಲಾರಿ ಮಾಲೀಕರಿಗೆ ಅವಕಾಶ ನೀಡಿ, ಉದ್ಯೋಗ ನೀಡಬೇಕು ಒಂದು ವೇಳೆ ಕಂಪನಿಗಳು ನಿರ್ಲಕ್ಷ ವಹಿಸಿದ್ದಲ್ಲಿ ಪಕ್ಷದ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುತ್ತದೆ. ಮೈನಿಂಗ್ ಲೋಡಿಂಗ್
ರದ್ದುಪಡಿಸದೆ ಇದ್ದ ದಿನಗಳಲ್ಲಿ ರೈಲ್ವೆ ತಡೆದು ಹಾಗೂ ರಸ್ತೆ ಮೇಲೆ ಉಗ್ರವಾದ ಪ್ರತಿಭಟನೆ ಮಾಡಲಾಗುತ್ತದೆ ಎಂದು ಕಿಡಿ ಕಾರಿದರು.
ರೈಲ್ವೆ ನಿಯಮ ಉಲ್ಲಂಘಿಸಿದ ಸಂಸದರು :
ಚಳ್ಳಕೆರೆ ನಗರದ ಪಾವಗಡ ರಸ್ತೆ ಮಾರ್ಗವಾಗಿ ರೈಲ್ವೆ ಗೇಟ್ ಪಕ್ಕದಲ್ಲಿ ಬಿಜೆಪಿ ಮುಖಂಡರು ಹಾಗೂ ನಾಗರೀಕರು ನಗರ ವ್ಯಾಪ್ತಿಯಲ್ಲಿ ಮೈನಿಂಗ್ ಲಾರಿಗೆ ಲೋಡಿಂಗ್ ಹಾಗೂ ಅನ್ ಲೋಡಿಂಗ್ ಗೆ ಅವಕಾಶ ನೀಡಬಾರದು ಎಂದು ಪ್ರತಿಭಟನೆ ನಡೆಸುವ ಸ್ಥಳಕ್ಕೆ ಸಂಸದರು ಬರಬೇಕಾದ ಸಂಧರ್ಭದಲ್ಲಿ ಎರಡು ನಿಮಿಷಗಳ ಕಾಲ ಮುಂಚೆಯೇ ರೈಲ್ವೆ ಗೇಟ್ ಬಂದ್ ಮಾಡಿತ್ತು , ಆದರೆ ಸಂಸದರ ಕಾರು ಬಂದು ನಿಲ್ಲಿಸಿದ್ದರು, ಆದರೆ ಕೆಲವು ಬಿಜೆಪಿ ಕಾರ್ಯಕರ್ತರು ರೈಲ್ವೆ ಗೇಟ್ ಮನ್ ಗೆ ಹೇಳಿ ಬಲಂವತವಾಗಿ ಗೇಟ್ ತೆಗೆಸಿ ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಹಾಗುತ್ತಿವೆ…
ಸ್ಥಳೀಯ ಶಾಸಕರ ವಿರುದ್ಧ ಬಿಜೆಪಿ ನಾಯಕರ ಆರೋಪ :
ಸಿದ್ದರಾಮಯ್ಯರವರ ಅನ್ನಭಾಗ್ಯ ಯೋಜನೆ ಚಳ್ಳಕೆರೆಯಲ್ಲಿ ಕಳ್ಳಭಾಗ್ಯವಾಗಿದೆ ಚಳ್ಳಕೆರೆ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಪಡಿತರಿಗೆ ವಿತರಿಸಬೇಕಾದಂತ ರಾಗಿ ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದೆ , ಇನ್ನು ಆಡಳಿತ ಪಕ್ಷದ ಶಾಸಕರೇ ಇದ್ದರೂ ಕೂಡ ನಿರ್ಲಕ್ಷ ವಹಿಸಿರುವುದು ಧೋರಣೆಯ ವಿಷಯ, ಕಾಂಗ್ರೆಸ್ ಪಕ್ಷದ ಕೆಲವರು ಅಕ್ರಮವಾಗಿ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ, ಆದರೆ ಅವರಿಗೆ ಅವಕಾಶ ನೀಡಿ ಇನ್ನುಳಿದವರಿಗೆ ಪ್ರಕರಣ ದಾಖಲಿಸುವುದು ಪೋಲಿಸ್ ಠಾಣೆ ಮೆಟ್ಟಿಲೇರಿಸುವುದು ಯಾವ ನ್ಯಾಯ, ಇನ್ನೂ ಪೀಡರ್ ಚಾನಲ್ ಅಕ್ರಮ ನಡೆದಿದೆ ಎಂದು ಬಿಜೆಪಿ ನಾಯಕರು ದಾಖಲೆ ಸಮೆತ ಬಿಡುಗಡೆ ಮಾಡಿದರೆ ಕೆಲವೇ ಕೆಲವರನ್ನು ಪತ್ರಿಕಾಗೋಷ್ಠಿ ನಡೆಸಿ ಕೈ ಬಿಡುವುದು ಸರಿಯಲ್ಲ ಅಭಿವೃದ್ಧಿ ಗೆ ನಮ್ಮ ಅಭ್ಯಾಂತರವಿಲ್ಲ ಆದರೆ ನಿಮ ಜೊತೆಗೆ ನಾಲ್ಕು ಜನ ಒಗಳಭಟ್ಟರನ್ನು ಇಟ್ಟುಕೊಂಡು ಅಭಿವೃದ್ಧಿ ಮಾಡಿದ್ದೆನೆ ಎಂದರೆ ಸಾಲದು ಜನರ ಇತ ಕಾಪಡಬೇಕು ಎಂದು ಸೂರನಹಳ್ಳಿ ಶ್ರೀನಿವಾಸ್, ಈಶ್ವರ ನಾಯಕ, ಜಯಪಾಲಯ್ಯ, ಮಲ್ಲೆಶ್ , ಇತರ ಬಿಜೆಪಿ ನಾಯಕರು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ , ಬಿಜೆಪಿ ಜಿಲ್ಲಾಧ್ಯಕ್ಷ ಕೆಟಿ ಕುಮಾರಸ್ವಾಮಿ ,, ತಾಲೂಕು ಮಂಡಲ ಅಧ್ಯಕ್ಷ ಸುರೇಶ್, ಯುವ ಮುಖಂಡ ಜಯಪಾಲಯ್ಯ, ಎವಿ ಬಿಪಿ ಮಂಜುನಾಥ್, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಮಲ್ಲೇಶ್, ಸೋಮಶೇಖರ್ ಮಂಡಿಮಠ, ಬಾಳೆಕಾಯಿ ರಾಮದಾಸ್, ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷ ಲಕ್ಷ್ಮಣ,
ಬೇಕರಿ ಮಂಜಣ್ಣ, ಈಶ್ವರ ನಾಯಕ, ದಯಾನಂದ, ಚನ್ನಗಾನಹಳ್ಳಿ ಬಾಬು, ಎಂ.ವೈ.ಟಿ.ಸ್ವಾಮಿ, ಮಹಿಳೆಯರು, ಇತರರು ಸಾರ್ವಜನಿಕರು ಪಾಲ್ಗೊಂಡಿದ್ದರು.


