ಅಕ್ರಮ ಮರಳು ಸಾಗಾಟ ಜಿಲ್ಲಾಡಳಿತ ವಿಫಲ

ತಾಲ್ಲೂಕು ಆಡಳಿತ ‌ಮೌನ

ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಆರೋಪ

ಚಳ್ಳಕೆರೆ‌ ಮೈಲಹಳ್ಳಿ ಸಮೀಪ ವೇದಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ

ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮೈಲಹಳ್ಳಿ ಸಮೀಪ ವೇದವತಿನದಿಯಲ್ಲಿ ಮರಳು ನೀತಿಯನ್ನು ಗಾಳಿಗೆ ತೂರಿ ೨೦ ಅಡಿ ಹಾಳಕ್ಕೆ ಗುಂಡಿಗಳನ್ನು ತೆಗೆದು ಅಕ್ರಮವಾಗಿ ಪ್ರತಿದಿನ ೨೦ ಲೋಡ್‌ಗಳು ಮರಳು ಸಾಗಾಟ ಮಾಡಿತ್ತಿದ್ದರು,

ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಯಾಕೇ ಕ್ರಮತೆಗದುಕೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಜಿಲ್ಲಾ ಆಡಳಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನದಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದರು, ಜಿಲ್ಲಾಧಿಕಾರಿಗಳು, ತಾಲ್ಲೂಕು ಅಧಿಕಾರಿಗಳು ಮೌನವಹಿಸಿದ್ದು ನೋಡಿದರೆ, ಅಕ್ರಮ ಮರಳು ಸಾಗಾಟಕ್ಕೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕುಮ್ಮಕ್ಕು ನೀಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದರು.

About The Author

Namma Challakere Local News
error: Content is protected !!