ಚಳ್ಳಕೆರೆ : ನಗರದಲ್ಲಿ ಚರಂಡಿ ಕಾಮಗಾರಿ ಮಾಡದೆ ಮೊದಲೇ ಬಿಲ್ ಪಡೆಯಾಲಾಗಿದೆ‌ ಎಂಬ ಸದಸ್ಯರ ಆರೋಪಕ್ಕೆ ಇಂದು ಜಿಲ್ಲಾ ಯೋಜನಾಧಿಕಾರಿ ಸತೀಶ್ ರೆಡ್ಡಿ ಕಾಮಗಾರಿ ಸ್ಥಳ ಪರೀಶಿಲನೆ ನಡೆಸಿದ್ದಾರೆ

ನಗರದ ಖಾಸಗಿ‌‌‌ ಬಸ್ ನಿಲ್ದಾಣ ಬಳಿ‌ ನಿರ್ಮಾಣವಾಗುವ ಚರಂಡಿ ಕಾಮಗಾರಿ ಕಳೆದ ನಾಲ್ಕು ತಿಂಗಳಗಳ‌ ಹಿಂದೆ ಕಾಮಗಾರಿಯ ಪೂರ್ತಿ ಹಣವನ್ನು ಬಿಡುಗಡೆಗೊಳಿಸಿದ‌ ಅಧಿಕಾರಿಗಳ ಕಾರ್ಯ ವೈಕರಿಯನ್ನು ಪರೀಶಿಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದಿದ್ದಾರೆ.

ಇಂದು ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪ ನಿರ್ಮಾಣ ಹಂತದಲ್ಲಿರುವ‌ ಚರಂಡಿಯನ್ನು ಅಧಿಕಾರಿಗಳ ತಂಡ ವೀಕ್ಷಣೆ‌ ಮಾಡಿದರು.

ಸುಮಾರು 6.82 ಲಕ್ಷ ರೂ. ಅನುದಾನದಡಿ ಸಿಸಿ ರಸ್ತೆ ಹಾಗೂ ಡಕ್ ನಿಮಾರ್ಣ ಅಭಿವೃದ್ಧಿ
ಪಡಿಸಲಾಗಿದೆ ಎಂದು ಗುತ್ತಿಗೆದಾರರ ಹೆಸರಿಗೆ ಹಣ ಸಂದಾಯ ಮಾಡಲಾಗಿದೆ ಎನ್ನುವ ಆರೋಪ ಮಾಡಿದ್ದ
ನಗರಸಭೆ ಸದಸ್ಯ ರಮೇಶ್ ಗೌಡ ಇವರ ಮನವಿಯಂತೆ ಇಂದು ಪರೀಶಿಲನೆ ನಡೆಸಿದ್ದಾರೆ.

ನಗರಸಭಾ ನಿಧಿಯಿಂದ ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣ ಮುಂಭಾಗ ಪೆಟ್ರೋಲ್ ಬಂಕ್ ಪಕ್ಕದಿಂದ ಸಾರ್ವಜನಿಕ ಶೌಚಾಲಯದ ಮೂಲಕ ಹಾದು ಹೊಗುವ ಸಿಸಿ ಚರಂಡಿ ಮತ್ತು ಡಕ್‌ಸ್ಲಾಬ್ ಕಾಮಗಾರಿಯನ್ನು ಪರೀಶಿಲನೆ ನಡೆಸಿದ್ದಾರೆ.

ಸದಸ್ಯರ ಆರೋಪಕ್ಕೆ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ಹಾಗೂ ಗುತ್ತಿಗೆಗಾದರರು ಸಿನಿಮೀಯ ರೀತಿಯಲ್ಲಿ ತರಾತುರಿಯಲ್ಲಿ
ಕಳೆದ ಮೂರು ದಿನಗಳಿಂದ ಗುತ್ತಿಗೆದಾರ ಹೆಸರಿನಲ್ಲಿ ಅಧಿಕಾರಿಗಳೇ ಬಾಕ್ಸ್ ಚರಂಡಿ
ಕಾಮಗಾರಿ ಪ್ರಾರಂಭಿಸಿ ಪ್ರಕರಣ ಮುಚ್ಚುಹಾಕುವ ಪ್ರಯತ್ನ ಮಾಡಿದ್ದಾರೆ

ಆದರೆ ಅಧಿಕಾರಿಗಳಿಂದ ತನಿಖೆ‌ ಮುಂದುವರಿಯುವುದು ಎನ್ನಲಾಗಿದೆ

ಸ್ಥಳದಲ್ಲಿ ಜಿಲ್ಲಾ ಯೋಜನಾಧಿಕಾರಿ ಸತೀಶ್ ರೆಡ್ಡಿ, ಪೌರಾಯುಕ್ತೆ ಟಿ ಲೀಲಾವತಿ, ನಗರಸಭೆ ಇಂಜಿನಿಯರ್ ವಿನಯ್, ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರನಾಯಕ ಇತರರು ಇದ್ದರು.

Namma Challakere Local News
error: Content is protected !!