ಹಟ್ಟಿ ಮಲ್ಲಪ್ಪ ನಾಯಕ ಸಂಘದ ವತಿಯಿಂದ ನೂತನವಾಗಿ ಉಪ ತಹಶೀಲ್ದರಾಗಿ ಕಾರ್ಯ ನಿರ್ವಹಿಸುತ್ತಿರುವ ಎಂ ಸುಧಾ ಅವರಿಗೆ ಅಭಿನಂದಿಸಲಾಯಿತು
ನಾಯಕನಹಟ್ಟಿ:: ಪಟ್ಟಣದ ನಾಡಕಚೇರಿಗೆ ಇತ್ತೀಚಿಗೆ ನೂತನವಾಗಿ ಆಗಮಿಸಿದ
ಉಪ ತಹಸಿಲ್ದಾರ್ ಎಂ ಸುಧಾ ಅವರಿಗೆ ಹಟ್ಟಿ ಮಲ್ಲಪ್ಪ ನಾಯಕ ಸಂಘದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಇವೇಳೆ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಜಿ ಬಿ ಮುದಿಯಪ್ಪ ಮಾತನಾಡಿ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ನೂತನವಾಗಿ ಯಾವುದೇ ಸರ್ಕಾರಿ ನೌಕರರು ಸ್ವಾಗತಿಸಿ ಅಭಿನಂದಿಸುವುದು ನಮ್ಮ ಹೋಬಳಿಯ ಜನತೆಯ ಪದ್ಧತಿಯಾಗಿದೆ ಆದ್ದರಿಂದ ಇಂದು ನಾಡಕಚೇರಿಯ ಉಪ ತಹಶೀಲ್ದಾರಾದ ಎಂ ಸುಧಾ ರವರಿಗೆ ಸ್ವಾಗತಿಸಿ ಅಭಿನಂದಿಸಲಾಯಿತು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಜಿ ಬಿ ಮುದಿಯಪ್ಪ, ಬೋರ್ ಸ್ವಾಮಿ, ಮಾಜಿ ಪಟ್ಟಣ ಪಂಚಾಯತಿ ಸದಸ್ಯರಾದ ಟಿ ಬಸಣ್ಣ, ಗೌಡಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಟಿ ರಂಗಪ್ಪ ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬಿ ಕಾಟಯ್ಯ, ನಲಗೇತನಹಟ್ಟಿ ಜಿ ವೈ ತಿಪ್ಪೇಸ್ವಾಮಿ, ಏಜೆಂಟ್ ಪಾಲಯ್ಯ, ರೇಖಲಗೆರೆ ತಿಪ್ಪೇಸ್ವಾಮಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು