ಚಳ್ಳಕೆರೆ :

ಅಕ್ರಮ ‌ಭೂ ಗಳ್ಳರಿಗೆ ಸಿಲುಕಿ ಭೂತಾಯಿ ಮಡಿಲು ಅಗೆಯುವ ಕಳ್ಳರನ್ನು ಮಟ್ಟ ಹಾಕುವಲ್ಲಿ ಚಳ್ಳಕೆರೆ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯ ಸರ್ವೆ ನಂಬರ್ 76 ರ ಗೋಮಾಳದ ಜಾಗದಲ್ಲಿ ಭೂ ಗಳ್ಳರು ಅಕ್ರಮ ಮಣ್ಣು ತೆಗೆಯುವ ಮೂಲಕ ಭೂ ತಾಯಿ ಮಡಿಲು ಬರಿದು ಮಾಡುತ್ತಿದ್ದಾರೆ.

ಇನ್ನೂ ಪ್ರಕೃತಿದತ್ತ ನೈಸರ್ಗಿಕ ಸಂಪತ್ತು ಆದ ಮಣ್ಣನ್ನು ದುರುಳರು ದೋಚುರುವ ಬಗ್ಗೆ ಅಧಿಕಾರಿಗಳು ಮೌನವಹಿಸಿರುವ ಹಿಂದಿನ ಉದ್ದೇಶ ಏನು ಎಂಬುದು ಗೋಚರಿಸದಾಗಿದೆ.

ಬಯಲು ಸೀಮೆ ಪ್ರದೇಶ ವಾದಂತಹ ಚಳ್ಳಕೆರೆಯಲ್ಲಿ ಸರ್ಕಾರದ ಗೋಮಾಳದ ಜಾಗಗಳನ್ನು ಗುರುತಿಸಿ ಕಂದಾಯ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಸಹಭಾಗಿತ್ವದಲ್ಲಿ ತಾಲೂಕು ಆಡಳಿತ ಗಿಡಮರಗಳನ್ನು ನಡೆಸುವುದು ಹಾಗೂ ಸರ್ಕಾರಿ ಜಾಗಗಳನ್ನು ಕಾಪಾಡುವುದು ಅಧಿಕಾರಿಗಳ ಕರ್ತವ್ಯ ಆದರೆ ಜಾಣ ಕುರುಡುತನ ಸಹಿಸುವುದಿಲ್ಲ ಎಂದು
ಕ.ರ.ವೇ ಪ್ರವೀಣ್ ಶೆಟ್ಟಿ ಬಣದ
ಚಳ್ಳಕೆರೆಯ ತಾಲ್ಲೂಕಿನ ಗೌರವ ಅಧ್ಯಕ್ಷ ಸಿ ಬೋಜರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.
.

About The Author

Namma Challakere Local News
error: Content is protected !!