ಚಳ್ಳಕೆರೆ :

ಪ್ರಥಮ ಏಕಾದಶಿ ಪ್ರಯುಕ್ತ ಚಳ್ಳಕೆರೆಯ ತ್ಯಾಗರಾಜ ನಗರದ ಬಡಾವಣೆಯಲ್ಲಿರುವ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಬೆಳಿಗ್ಗೆ ಕಾಕದಾರತಿ ಎಕವಾರ ರುದ್ರಾಭಿಷೇಕ ಮಹಾಮಂಗಳಾರತಿ ಕಾರ್ಯಕ್ರಮ ಹಾಗೂ ಸಾಯಂಕಾಲ ಬನಶಂಕರಿ ಮಹಿಳಾ ಮಂಡಳಿವತಿಯಿಂದ ವಿಷ್ಣುಸಹಸ್ರನಾಮ, ಪಾರಾಯಣ ಭಜನೆ ಕಾರ್ಯಕ್ರಮ ನೆರವೇರಿಸಲ್ಪಟ್ಟರು.

ಇದೆ ಸಂದರ್ಭದಲ್ಲಿ ಭದರಿನಾಥ ಕ್ಷೇತ್ರದ ಶ್ರೀ ಶಂಕರ ಚಾರ್ಯ ಮಠದ ಯತಿಗಳಾದ ಅಖಂಡನಂದಾ ಪುರಿ ಜೀವಾನಂದ ಜ್ಯೋತಿ ಸ್ವಾಮಿಗಳು ಆಗಮಿಸಿ ಗುರುತತ್ವ ದ ಬಗ್ಗೆ ವಿಸ್ತಾರವಾಗಿ ಆಶೀರ್ವಚನ ನೀಡಿದರು.

ಈ ಕಾರ್ಯಕ್ರಮಕ್ಕೆ ಚಳ್ಳಕೆರೆ ತಾಲ್ಲೂಕಿನ ಬ್ರಾಹ್ಮಣ ಸಂಘ ದ ಅಧ್ಯಕ್ಷರಾದ ಅನಂತ ರಾಮ್ ಗೌತಮ್, ವೆ.ಬ್ರ.ಶ್ರೀ.ಗಳಾದ ಸಿ. ನ್. ನಾಗಶಯನ್ ಗೌತಮ್ ಶ್ರೀನಾಥ್ ಹಾಗೂ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ರಾದ ಮಹೇಶ್ ಉಪಸ್ಥಿತರಿದ್ದರು..

About The Author

Namma Challakere Local News
error: Content is protected !!