ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಚಳ್ಳಕೆರೆ ಶಾಖೆ ವತಿಯಿಂದ ವೈದ್ಯರ ಕ್ರೀಡಾಕೂಟ.
ಜ್ಯೋತಿ ಬೆಳಗುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅಸೋಸಿಯನ್ ಅಧ್ಯಕ್ಷ ಡಾ. ಟಿ ಎಮ್ .ನಟರಾಜ್…!
ಚಳ್ಳಕೆರೆ : ದಿನನಿತ್ಯವೂ ರೋಗಿಗಳ ತಪಾಸಣೆ ಮೂಲಕ ಕಾರ್ಯಭಾರ ಒತ್ತಡ ದಲ್ಲಿದ್ದ ವೈದ್ಯರು ತಂಡ ತಮ್ಮ ವೈದ್ಯರ ದಿನಾಚರಣೆ ಅಂಗವಾಗಿ ಮುಂಜಾನೆ ವೈದ್ಯರ ಕ್ರೀಡಾ ಕೂಟ ಆಯೋಜಿಸಿರುವುದು ಶಾಘ್ಲನೀಯ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಚಳ್ಳಕೆರೆ ತಾಲ್ಲೂಕು ಶಾಖೆಯ ಅಧ್ಯಕ್ಷ ಡಾ.ಟಿ.ಎಂ.ನಟರಾಜ್ ಸಂತಸ ವ್ಯಕ್ತಪಡಿಸಿದರು.
ಅವರು ನಗರದ ಬೆಂಗಳೂರು ರಸ್ತೆಯಲ್ಲಿ ಇರುವ ವಾರಿಯರ್ಸ್ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ವೈದ್ಯರ ಕ್ರೀಡಾ ಕೂಟಕ್ಕೆ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು, ನಗರದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವೈದ್ಯರೆಲ್ಲ ಒಟ್ಟಿಗೆ ಸೇರಿ ನಗರದ ವಾರಿಯರ್ಸ್ ಶಾಲಾ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಿರುವುದು ಸಂಸತ ತಂದಿದೆ, ಜುಲೈ ಒಂದರಂದು ವೈದ್ಯರ ದಿನಾಚರಣೆ ಅಂಗವಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ವೈದ್ಯರೆಲ್ಲ ಒಟ್ಟಿಗೆ ಸೇರಿ ವಿವಿಧ ಕ್ರೀಡೆಗಳಲ್ಲಿ ಭಾಗವಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ಕಾರ್ಯದರ್ಶಿಯಾದ ಡಾ.ಅರುಣ್ ಕುಮಾರ್ ಕುನಾ ಮಾತನಾಡಿ, ಚಳ್ಳಕೆರೆ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ವೈದ್ಯರ ದಿನಾಚರಣೆ ಅಂಗವಾಗಿ ಎರಡು ದಿನಗಳ ಕಾಲ ವೈದ್ಯರ ಕ್ರೀಡಾಕೂಟಾ ಆಯೋಜಿಸಲಾಗಿದೆ, ವೈದ್ಯರ ವಿವಿಧ ಕ್ರೀಡೆಗಳಾದ 100 ಮೀಟರ್ ಓಟ, ಜಾವಲಿನ್ ಥ್ರೋ, ಶಾಟ್ ಪುಟ್ , ವೋಪ್ಸ್ ಗೇಮ್ಸ್, ಹೆಡ್, ಶೋಲ್ಡರ್ ಗೇಮ್ಸ್, ಕಪಲ್ ಗೇಮ್ಸ್ , ಬಲೂನ್ ಡ್ಯಾನ್ಸ್ , ಬಲೂನ್ ಪಂಪಿಂಗ್ ಚಾಲೆಂಜ್, ಈಗೆ ಹಲವಾರು ಕ್ರೀಡೆಗಳಲ್ಲಿ ವೈದ್ಯರು ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಡಾ. ಟಿ ಎಮ್ ನಟರಾಜ್, ಕಾರ್ಯದರ್ಶಿಗಳಾದ ಡಾ.ಅರುಣ್ ಕುಮಾರ್ ಕೂನ, ಉಪಾಧ್ಯಕ್ಷರಾದ ಡಾ ಅಮಿತ್ ಗುಪ್ತ , ಸೆಂಟ್ರಲ್ ಕೌನ್ಸಿಲ್ ಸದಸ್ಯರಾದ ಡಾ.ಓಬಣ್ಣ ಕ್ಕೆ ಪೂಜಾರ್, ರಾಜ್ಯ ಕೌನ್ಸಿಲ್ ಸದಸ್ಯ ಎಂ ವಿ ಕೃಷ್ಣರಾಜ, ಡಾ. ನಾಗರಾಜ್, ಡಾ.ಕೆ ಎಮ್ .ಜಯಕುಮಾರ್, ಡಾ. ಎಸ್ ಡಿ ಲೋಕೇಶ್ , ಡಾ. ಬಿ ರಾಕೇಶ್, ಇನ್ನು ಇತರರು ಅನೇಕ ವೈದ್ಯರು ಕ್ರೀಡೆಯಲ್ಲಿ ಭಾಗವಹಿಸಿದ್ದರು.

