ಚಳ್ಳಕೆರೆ :

ಮೋಹರಂ ಚಿತ್ರದುರ್ಗದ ನಾಯಕರ ಭಾವೈಕ್ಯತೆಯ ಪ್ರತೀಕ ಎಂದು ಚಳ್ಳಕೆರೆ ನಿಕಟ ಪೂರ್ವ ತಹಶೀ ಲ್ದಾರ್ ಎನ್. ರಘುಮೂರ್ತಿ ಹೇಳಿದರು

ಅವರು ಚಳ್ಳಕೆರೆ ತಾಲೂಕಿನ ನಲಗೇತನಟ್ಟಿ ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಆಯೋಜಿಸಿರುವ ಮೊಹರಂ ಹಬ್ಬದ ಪ್ರಯುಕ್ತದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಚಿತ್ರದುರ್ಗದ ನಾಯಕರಿಗೆ ಭಾವೈಕ್ಯತೆ ಸಾಮರಸ್ಯ ಮತ್ತು ಸಹಬಾಳ್ವೆಯ ಬದುಕು ತುಂಬಾ ಅಚ್ಚು ಮೆಚ್ಚು ಚಿತ್ರದುರ್ಗದ ಪಾಳ್ಳೇಗಾರರ ಕಾಲದಿಂದಲೂ ಮುಸ್ಲಿಂ ಜನಾಂಗದವರು ಆಚರಿಸುವಂತಹ ಈ ಮೋಹರಂ ದಿನದಂದು ಜಾತಿ ಮತ್ತು ಧರ್ಮ ಭೇದವನ್ನು ಮರೆತು ಭಾವೈಕ್ಯತೆಯಲ್ಲಿ ಬೆರೆತು ಹೋಗುತ್ತಿದ್ದರು.

ಚಿತ್ರದುರ್ಗದ ಹಲವು ಭಾಗಗಳಲ್ಲಿ ಮುಸ್ಲಿಂ ಜನಾಂಗದವರು ಇಲ್ಲದಿದ್ದರೂ ಕೂಡ ಅಂತಹ ಗ್ರಾಮಗಳಲ್ಲಿ ಪೀರ್ಲ ಹಬ್ಬಗಳನ್ನು ಆಚರಿಸುತ್ತಾರೆ ಇದು ಭಾವೈಕ್ಯತೆಗೆ ಹಿಡಿದ ಕೈಗಡಿಯಾಗಿದೆ ಪ್ರವಾದಿ ಮಹಮ್ಮದ್ ಮೊಮ್ಮಗ ಇಮಾಮ್ ಹುಸೇನ್ ಮತ್ತು 72 ಜನರು ಪ್ರಾರ್ಥನೆಯಲ್ಲಿ ತೊಡಗಿದ್ದಂತ ಸಂದರ್ಭದಲ್ಲಿ ವೈರಿಗಳಿಂದ ಶಿರಶ್ಚೇಧನವಾಗುತ್ತೆ ಆ ಒಂದು ನೆನಪಿಗಾಗಿ ಪೀರ್ಲ್ ಹಬ್ಬವನ್ನು (ಮೊಹರಂ ) ಶೋಕದ ರೀತಿಯಲ್ಲಿ ಆಚರಿಸುತ್ತಾರೆ ವಿಚಿತ್ರವೆಂದರೆ ಮುಸಲ್ಮಾನರಿಗಿಂತ ಅನ್ಯ ಜನಾಂಗದವರೇ ಹೆಚ್ಚು ಹೆಚ್ಚು ಸೇರಿ ಈ ಹಬ್ಬವನ್ನು ಭಕ್ತಿ ಮತ್ತು ಸಡಗರಗಳಿಂದ ಆಚರಿಸುತ್ತಾರೆ.

ಈ ದಿಸೆಯಿಂದಲೇ ಚಿತ್ರದುರ್ಗದ ಭಾಗದಲ್ಲಿ ಅತಿ ಹೆಚ್ಚು ಭಾವೈಕ್ಯತೆ ಸಾಮರಸ್ಯ ಮತ್ತು ಸಹೋದರತ್ವ ಮನೆಮಾಡಿದೆ ಹೆಚ್ಚು ಹೆಚ್ಚು ಯುವಕರು ಸೇರಿ ಆಚರಣೆ ಮಾಡುವಂತ ಈ ಹಬ್ಬದಿಂದ ಸಮಾಜದಲ್ಲಿ ಭಾವೈಕ್ಯತೆ ಮತ್ತು ಸಹೋದರತ್ವ ಇನ್ನೂ ಇಮ್ಮಡಿಯಾಗಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಪಟೇಲ್ ಜಿ ತಿಪ್ಪೇಸ್ವಾಮಿ, ಯತ್ನಟ್ಟಿ ಗೌಡ್ರು ಮಾತನಾಡಿ ನೂರಾರು ವರ್ಷಗಳಿಂದ ಇಂತಹ ಸಾಮರಸ್ಯದ ಬದುಕನ್ನ ಸೌಹಾರ್ದಯುತವಾದ ನಡವಳಿಕೆಯನ್ನು ಮತ್ತು ಭಾವೈಕ್ಯತೆಯನ್ನು ಇಲ್ಲಿನ ಜನ ಮೈಗೂಡಿಸಿಕೊಂಡು ಬಂದಿದ್ದಾರೆ ಜೊತೆಗೆ ಅಷ್ಟೇ, ಭಾವ ಪರವಶರಾಗಿ ತನ್ಮಯತೆಯಿಂದ ಧಾರ್ಮಿಕ ಆಚರಣೆಯನ್ನು ಅನುಸರಿಸುತ್ತಿದ್ದಾರೆ ಸಾವಿರಾರು ಜನ ಸೇರಿದರೂ ಕೂಡ ಎಲ್ಲಿಯೂ ಶಾಂತಿ ಮತ್ತು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬರದ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ದಕ್ಷಿಣ ಭಾರತದಲ್ಲಿ ಇಂತಹ ಸಾಮರಸ್ಯದ ಬದುಕು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುತ್ತಯ್ಯ, ದೊಡ್ಡ ಬೋರಯ್ಯ, ಚಿತ್ತಯ್ಯನಬೋರಯ್ಯ, ಮುತ್ತಯ್ಯ ಮಂಜಣ್ಣ ಮುಂತಾದವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!