ಚಳ್ಳಕೆರೆ :
ಚಳ್ಳಕೆರೆ: 40ಲಕ್ಷ ಹಣ ದುರುಪಯೋಗ, ತಪ್ಪಿತಸ್ಥರ
ವಿರುದ್ಧ ಕ್ರಮ
ಚಳ್ಳಕೆರೆ ದೇವರೆಡ್ಡಿಹಳ್ಳಿ ಗ್ರಾ ಪಂ ಲ್ಲಿ ಸುಮಾರು 40 ಲಕ್ಷಕ್ಕೂ
ಅಧಿಕ ಹಣ ದುರುಪಯೋಗವಾಗಿದೆ ಎಂದು ಆರೋಪ ಕೇಳಿ
ಬಂದ ಹಿನ್ನೆಲೆಯಲ್ಲಿಂದು ತಾ ಪಂ ಇಓ ಶಶಿಧರ್ ಭೇಟಿ ನೀಡಿ
ಪರಿಶೀಲಿಸಿ, ನಂತರ ಮಾಧ್ಯಮಗಳಿಗೆ ಮಾತನಾಡಿ ಪಿಡಿಒ
ವೇದವ್ಯಾಸಲು ವಿರುದ್ಧ ಸಾರ್ವಜನಿಕರು ದೂರು ನೀಡಿದ್ದಾರೆ.
ಸಹಾಯಕ ಲೆಕ್ಕಾಧಿಕಾರಿಗಳು ಮತ್ತು ನಿರ್ದೇಶಕರ ನೇತೃತ್ವದಲ್ಲಿ
ತನಿಖಾ ತಂಡ ರಚಿಸಿದೆ. ತನಿಖೆ ನಡೆಸಿ, ಯಾರ್ಯಾರು
ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ
ಜರುಗಿಸಲಾಗುವುದೆಂದರು.

