ಚಳ್ಳಕೆರೆ :
ಚಳ್ಳಕೆರೆ: ಬಾರದ ಮಳೆ ಶೇಂಗಾ ಬಿತ್ತನೆಗೆ ತೊಡಕು
ರೈತರಲ್ಲಿ ಆತಂಕ
ಜುಲೈ ಅಂಭವಾಗುತ್ತಿದ್ದಂತೆ ಶೇಂಗಾ ಬಿತ್ತನೆಗೆ ರೈತರು ತೋರಿಸುತ್ತಿದ್ದ
ಉತ್ಸಾಹ, ಜಿಲ್ಲೆಯಲ್ಲಿ ಇನ್ನೂ ಕಾಣುತ್ತಿಲ್ಲ.
ಮಳೆರಾಯ ಕೃಪೆ
ತೋರದ ಕಾರಣ ಚಳ್ಳಕೆರೆ ತಾಲೂಕಿನ ರೈತರ ಮನಸ್ಸಿನಲ್ಲಿ
ಆತಂಕ ಹೆಚ್ಚಾಗಿದೆ. ಆರಿದ್ರ ಹಿರೇ ಪುಷ್ಪ ಚಿಕ್ಕ ಪುಷ್ಪ ಮನೆಯ
ಮುಗಿಯುವಷ್ಟರಲ್ಲಿ, ಶೇಂಗಾ ಬಿತ್ತನೆಯಾದರೆ ಮಾತ್ರ ಸರಿಯಾದ
ಸಮಯಕ್ಕೆ ಬೆಳೆ ಬರುತ್ತದೆ. ಸಾಮಾನ್ಯವಾಗಿ ಜುಲೈ 1ರಿಂದಲೇ
ಶೇಂಗಾ ಬಿತ್ತನೆ ಆರಂಭವಾಗುತ್ತಿತ್ತು. ಮಳೆ ಬಾರದ ಕಾರಣ ಬಿತ್ತನೆ
ಆರಂಭವಾಗಿಲ್ಲ ಎಂದು ರೈತರು ಹೇಳುತ್ತಾರೆ.

