ಚಳ್ಳಕೆರೆ :
ಚಿತ್ರದುರ್ಗ: ಬೀದಿಗೆ ಬಿದ್ದಿದೆ ಬುಡುಗ ಜನಾಂಗದ ಜನರ
ಜೀವನ
ಮೈ ಮತ್ತು ಮುಖಕ್ಕೆ ಬಣ್ಣಗಳನ್ನು ಹಚ್ಚಿಕೊಂಡು
ಪೌರಾಣಿಕ ಪೋಷಾಕು, ಧರಿಸಿಕೊಂಡು ಬೀದಿ ಬೀದಿಯಲ್ಲಿ
ನಾಟಕಗಳನ್ನಾಡುತ್ತಿರುವ ಬುಡುಗ ಜನಾಂಗದವರ ಜೀವನ
ಬೀದಿಯಲ್ಲಿ ನಿಂತಿದೆ.
ಚಿತ್ರದುರ್ಗದ ಆದಿಶಕ್ತಿ ಬಡಾವಣೆ
ಗುಡಿಸಲುಗಳಲ್ಲಿ, ಕತ್ತಲೆಯಲ್ಲಿ 30ವರ್ಷಗಳಿಂದ ಜೀವನ
ಸವೆಸುತ್ತಿದ್ದಾರೆ. ಹಗಲು ವೇಷದ ಸಣ್ಣ ವ್ಯಾಪಾರ ಮಾಡಿಕೊಂಡು
ಜೀವ ನಡೆಸುತ್ತಿದ್ದೇವೆ. ಬೇಡಿ ಊಟ ಮಾಡುತ್ತಿದ್ದೇವೆ. ನಮಗೆ
ಸರ್ಕಾರ ಏನನ್ನು ಮಾಡಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ
ಬರುತ್ತಾರೆಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

