ಚಳ್ಳಕೆರೆ :
ಚಿತ್ರದುರ್ಗ: ಕ್ರೀಡಾ ಇಲಾಖೆ ಅಧಿಕಾರಿ ವಿರುದ್ಧ
ಕ್ರಮಜರುಗಿಸಿ
ಚಿತ್ರದುರ್ಗದ ಯುವಜನ ಸೇವಾ ಕ್ರೀಡಾ ಮತ್ತು ಸಬಲೀಕರಣ
ಇಲಾಖೆ ಸಹಾಯಕ ನಿರ್ದೇಶಕಿ ಸುಚೇತ ನೆಲವಗಿ ವಿರುದ್ಧ
ಕ್ರಮ ಜರುಗಿಸಿವಂತೆ ಒತ್ತಾಯಿಸಿ, ಇಂದು ಜಿಲ್ಲಾಧಿಕಾರಿ ಕಚೇರಿ
ಬಳಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯು
ಪ್ರತಿಭಟನೆ ನಡೆಸಿತು.
ಸುಚೇತ ನೆಲವಗಿ ಅವರು, ಇಲಾಖೆಯಲ್ಲಿನ
ಕ್ರೀಡೆಗಾಗಿ ಇದ್ದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ.
ಎರಡು ವರ್ಷಗಳಿಂದ ದೂರು ಕೊಟ್ಟರು ಮೇಲಾಧಿಕಾರಿಗಳು
ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ತನಿಖೆ ನಡೆಸಿ ಕ್ರಮ
ಜರುಗಿಸುವಂತೆ ಒತ್ತಾಯಿಸಿದರು.

