ಚಳ್ಳಕೆರೆ :
ಹೊಸದುರ್ಗ: ಕುಡಿವ ನೀರಿಗೆ ಅಡ್ಡಿಪಡಿಸುವುದು
ಅಕ್ಷಮ್ಯ
ಹೊಸದುರ್ಗದ 346 ಹಳ್ಳಿಗಳಿಗೆ ಭದ್ರಾ ಯೋಜನೆಯಿಂದ ಕುಡಿವ
ನೀರು, ಕೊಡುವುದಕ್ಕೆ ಅಡ್ಡಿ ಪಡಿಸುವುದು ಅಕ್ಷಮ್ಯ ಅಪರಾಧ
ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.
ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಕುಡಿಯುವ
ನೀರಿಗೆ ಯಾರೂ ಅಡ್ಡಿಪಡಿಸಬಾರದು. ದಾವಣಗೆರೆಯಲ್ಲಿ
ಪಕ್ಷಾತೀತವಾಗಿ ಕೆಲವು ಮುಖಂಡರು ರಾಜಕಾರಣ ಮಾಡುತ್ತಾ
ಅಡ್ಡಿ ಪಡಿಸುತ್ತಿದ್ದಾರೆ. ಇದನ್ನು ತೀವ್ರವಾಗಿ ವಿರೋಧಿಸುತ್ತೇನೆ.
ಸಂವಿಧಾನವೂ ಈ ಬಗ್ಗೆ ಹೇಳಿದೆ ಎಂದರು.

