ಚಳ್ಳಕೆರೆ :
ಚಿತ್ರದುರ್ಗ: ಮುರುಘಾಶ್ರೀಗೆ ಹೇಳಿಕೆ ದಾಖಲಿಸಲು
ಕೋರ್ಟ್ ಆದೇಶ
ಚಿತ್ರದುರ್ಗದ ಡಾ ಶಿವಮೂರ್ತಿ ಮುರುಘಾ ಶರಣರ, ವಿರುದ್ಧ
ಫೋಕ್ಸ್ ಪ್ರಕರಣ ವಿಚಾರಣೆ ಕೊನೆ ಹಂತಕ್ಕೆ ಬಂದಿದೆ.
ಅಪ್ರಾಪ್ತಯರ ಮೇಲೆ ಲೈಂಗಿಕ ದೌರ್ಜನ್ಯ, ಪ್ರಕರಣದ ಎ-1
ಆರೋಪಿ ಶಿವಮೂರ್ತಿ ಮುರುಘಾ ಶರಣರ ಹೇಳಿಕೆ ದಾಖಲಿಸಲು
ದಿನಾಂಕ ನಿಗದಿ ಮಾಡಿದೆ. ಸೋಮವಾರ ಚಿತ್ರದುರ್ಗ 2ನೇ
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿದ್ದು,
ಶಿವಮೂರ್ತಿ ಮುರುಘಾ ಶರಣರ ಹೇಳಿಕೆಗೆ ಜುಲೈ 3ರಂದು
ದಿನಾಂಕ ನಿಗದಿ ಮಾಡಿದೆ. ಮುರುಘಾಶ್ರೀ ಖುದ್ದು ಹಾಜರಾಗಿ
ಹೇಳಿಕೆ ದಾಖಲಿಸಲು ಕೋರ್ಟ್ ಆದೇಶಿಸಿದೆ.

