ಅಕ್ಕ-ಪಕ್ಕದ ಜಿಲ್ಲೆಗಳಿಂದ ಚಳ್ಳಕೆರೆ ನಗರಕ್ಕೆ ದಾಳಿ ಇಟ್ಟಿರುವ ಭೂ ಮಾಫೀಯ ಗ್ಯಾಂಗ್ ಪಿಟಿಸಿಲ್ ಕಾಯ್ದೆ ದುರುಪಯೋಗ ಪಡಿಸಿಕೊಂಡು ಸರ್ಕಾರದ ಕಾನೂನು ಉಲ್ಲಂಘನೆ ಮೂಲ ಸಾಗುವಳಿದಾರರ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಸೂಕ್ರ ಕಾನೂನು ಕ್ರಮ ಜರುಗಿಸುವಂತೆ ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ಒತ್ತಾಯಿಸಿದ್ದಾರೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಕಾಲದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಆಡಳಿತ ಅವಧಿಯಲ್ಲಿ ಜಾರಿಗೆ ತಂದ ಮೂಲ ಸಾಗುವಳಿದಾರರಿಗೆ ಡಿ, ಲಿಮಿಟೇಷನ್ ಕೊನೆ ಇಲ್ಲದಂತೆ ಕಾನೂನು ರೂಪಿಸಿದೆ, ಇದರಂತೆ ಮೂಲ ಜಮೀನುದಾರರು ವಾಪಸ್ ಪಡೆಯಲು ಕಾಲ ಅವಕಾಶ ಇಲ್ಲ ಯಾವಾಗ ಬೇಕಾದರೂ ಸಾಗುವಳಿದಾರರು ವಾಪಸ್ಸು ಪಡೆಯಬಹುದು ಎಂದು ಸರ್ಕಾರ ಕಾನೂನು ರೂಪಿಸಿದೆ. ಈಗಿರುವಾಗ ಭೂ ಮಾಫಿಯಾಮೇಲೆ ದೌರ್ಜನ್ಯ ಎಸಗಿ ಭೂಮಿ ಖರೀದಿ ಮಾಡುತ್ತೀರುವ ಪ್ರಕರಣಗಳು ಚಳ್ಳಕೆರೆ ಪಟ್ಟಣದಲ್ಲಿ ಒಂದೆರೆಡು ಪ್ರಕರಣಗಳು ಬೆಳಕಿಗೆ ಬಂದಿವೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂ ಮಾಫಿಯಾ ಗ್ಯಾಂಗ್ ಸಾಗುವಳಿದಾರರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಡೆದಿದ್ದರೂ ಇಂತಹವರ ಮೇಲೆ ಪೋಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.? ಈ ಪ್ರಕರಣ ಸಿವಿಲ್ ವ್ಯಾಜ್ಯ ಆಗಿರುವುದರಿಂದ ನಾವು ಎಂಟ್ರಿ ಆಗುವುದಿಲ್ಲ ಎಂದು ಪೋಲಿಸರು ಹೇಳುತ್ತಾರೆ. ಹೀಗಾದರೇ ದಲಿತರಿಗೆ ರಕ್ಷಣೆ ನೀಡುವವರು ಯಾರು…?
ಮೊದಲು ಸರ್ಕಾರದ ಈ ಕಾನೂನು ಪರವಾಗಿ ಇರುವ ದಲ್ಲಾಳಿಗಳು ನಂತರ ಮಾಫಿಯಾ ಗ್ಯಾಂಗ್ ನೊಂದಿಗೆ ಕೈಜೋಡಿಸಿ ಪಿಟಿಸಿಎಲ್ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಮಾಡಿದ ಈ ಕಾಯ್ದೆ ದುರುಪಯೋಗವಾಗುತ್ತಿದೆ.
ಇದೇ ರೀತಿ ಮೂಲ ದರಕಾಸ್ತು ಆಸ್ತಿಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗದ ಮೂಲ ಸಾಗುವಳಿದಾರರು ಯಾರಿಗೂ ಪರಬಾರೆ ಮಾಡಬಾರದೆಂದು ಪ್ಲ್ಲಾಗ್ ಅಳವಡಿಸಲಾಗಿದೆ. ಆದರೂ ರಾತ್ರೋ ರಾತ್ರಿ ಪ್ಲಾಗ್ ತೆಗೆದು ನೋಂದಣಿಮಾಡಿಸುತ್ತಿದ್ದು, ಇದರಲ್ಲಿ ಅಧಿಕಾರಿಗಳು ಶಾಮಿಲಾಗಿದ್ದಾರೆಂದು ಆರೋಪಿಸಲಾಗಿದೆ.
ಕಂದಾಯ ಅಧಿಕಾರಿಗಳ ಅಧಿಕಾರದಿಂದ ಪಿ.ಟಿ.ಸಿ.ಎಲ್ ಕಾಯ್ದೆ ದುರುಪಯೋಗವಾಗುತ್ತಿದ್ದು, ಸರ್ಕಾರ ಜಾರಿಗೆ ತಂದಿರುವ ಡಿ, ಲಿಮಿಟೇಷನ್ ಕಾಯ್ದೆ ಕಾಲ ಕಸದಂತಾಗಿದೆ ಈ ಕಾಯ್ದೆ ದುರುಪಯೋಗ ಪಡಿಸಿಕೊಳ್ಳುತ್ತಿರುವ ಭೂ ಮಾಫಿಯಾ ವ್ಯಕ್ತಿಗಳ ವಿರುದ್ದ ವಕ್ಫ್ಬೋರ್ಡ್ ಆಸ್ತಿ ರಕ್ಷಣೆಯಂತೆ ಪಿ.ಟಿ.ಸಿ.ಎಲ್ ಕಾಯ್ದೆಯನ್ನು ಸಂರಕ್ಷಿಸಲು ಗೊಂಡಾ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಎಂ.ಶಿವಮೂರ್ತಿ ಒತ್ತಾಯಿಸಿದ್ದಾರೆ.
ಹೊಸದಾಗಿ ನಿಮಾರ್ಣವಾಗುವ ಲೇಔಟ್, ಶಾಲಾ ಕಾಲೇಜ್, ಪಾರ್ಕ್ ದೇವಸ್ಥಾನ ಮತ್ತು ಸಿ.ಎ. ಸೈಟ್ ಗಳಿಗೆ ಜಾಗ ಬಿಟ್ಟು ಹೊಸದಾಗಿ ನಿರ್ಮಾಣವಾಗುವ, ಹಳೇ ಲೇಔಟ್ ಗಳಿಗೆ ಚರಂಡಿ, ಬೀದಿ ದೀಪ, ಇವು ಯಾವ ಮೂಲ ಸೌಕರ್ಯಗಳು ಇಲ್ಲ. ಇವುಗಳಿಗೆ ಇ-ಖಾತ ಆದೇಗೆ ಮಾಡಿಕೊಟ್ಟರು ಎಂಬುದು ಯಕ್ಷ ಪ್ರಶ್ನೆ…?
ಉದಾಹರಣೆಗೆ ೩೦*೪೦ ರ ಸೈಟಿಗೆ ರೂ. ೨೫,೦೦,೦೦೦/- ಲಕ್ಷ ಇದ್ದಾಗ ನಗರಸಭೆಗೆ ಎಸ್.ಎಸ್.ಶುಲ್ಕ ಎಷ್ಟು ಕಟ್ಟಬೇಕು? ಕಟ್ಟದೆ ಇದ್ದರೂ ಅದೇಗೆ ಇ-ಸ್ವತ್ತು ಕೊಡಲಾಗಿದೆ. ಕೋರ್ಟ್ನಲ್ಲಿ ಸ್ಟೇ ಇದ್ದರು ನಗರಸಭೆ ಇ-ಸ್ವತ್ತು ಕೊಟ್ಟಿರುವ ಆನೇಕ ಉದಾಹಣೆಗಳಿವೆ. ಉಧಾಹರಣೆಗೆ ವಿಠಲ್ ನಗರ(ಮಾದಿಗರ ನಗರ) ಇಂತಹ ಕೆಲವು ಲೇಔಟ್ ಗಳಿಗೆ ಕೋರ್ಟ್ ಸ್ಟೇ ಇದ್ದರೂ ಅದೇಗೆ ಇ-ಸ್ವತು ನೀಡಿದ್ದಾರೆ..? ಬ್ಯಾಂಕ್ ನವರು ಲೋನ್ ಕೊಡದೇ ಇದ್ದರೂ, ತಹಶೀಲ್ದಾರ್ ರವರು ಪಿ.ಟಿ.ಸಿ.ಎಲ್ ಕಾಯ್ದೆಯಲ್ಲಿ ಒಳಪಡುವುದಿಲ್ಲ ಎಂದು ಎನ್.ಓ.ಸಿ ಕೊಡುತ್ತಿದ್ದಾರೆ ಇದರಲ್ಲಿ ಅಧಿಕಾರಿ ವರ್ಗದವರು ಕಾನೂನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಬೇಲೆಯೇ ಎದ್ದು ಹೊಲ ಮೇದಂತಾ ಇದನ್ನು ಸರಿಪಡಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಹೇಳಿದ್ದಾರೆ…

