ಚಳ್ಳಕೆರೆ ಪೊಲೀಸ್ ಠಾಣೆ ವತಿಯಿಂದ ಮಾದಕ ವಸ್ತುಗಳ ಅಂಗವಾಗಿ ಮಾದಕ ವಸ್ತುಗಳ ನಿಷೇದ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದು ನಗರದ ಗಿರಿಯಮ್ಮ ಪದವಿಪೂರ್ವ ಬಾಲಕಿಯರ ಕಾಲೇಜು ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಿ ಎಂ ಜಿ ಎಚ್ ಎಸ್ ಪ್ರೌಢಶಾಲೆಯ ವತಿಯಿಂದ ಪೋಲೀಸ್ ಹಮ್ಮಿಕೊಂಡಿದ್ದ
ಮಾದಕ ವಸ್ತುಗಳ ಅಂಗವಾಗಿ ಮಾದಕ ವಸ್ತುಗಳ ನಿಷೇದ ಕುರಿತು ಅರಿವು ಕಾರ್ಯಕ್ರಮಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿವಿ ರಾಜಣ್ಣ ಚಾಲನೆ ನೀಡಿದರು.
ನಂತರ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿ ನಂತರ ಮಾತನಾಡಿದ ಡಿವೈ ಎಸ್ಪಿ ಟಿಬಿ. ರಾಜಣ್ಣ.
ಹಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವನವನ್ನೇ ಸರ್ವನಾಶ ಮಾಡಿಕೊಳ್ಳುತ್ತಿದ್ದಾನೆ
ಹಾಗೂ ಆರ್ಥಿಕವಾಗಿ ದಿವಾಳಿ ಕೂಡ ಆಗುತ್ತಾನೆ.
ಇದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಮಾಜ ಮಾದವ ವಸ್ತುಗಳಿಂದ ಮುಕ್ತವಾಗಿರಬೇಕು. ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುಲಾಗುತ್ತಿದ್ದೆ
ವಿಶ್ವದಾದ್ಯಂತ ಈ ದುಶ್ಚಟಗಳಿಗೆ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ.
ಇಂತಹ ದುಶ್ಚಟಗಳಿಗೆ ಬಲಿಯಾಗದಂತೆ ಯುವಕರು ಮಕ್ಕಳು ಜಾಗೃತರಾಗಿ ಆರೋಗ್ಯವಂತರಾಗಿ ತಮ್ಮ ಜೀವನ ಕಟ್ಟಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕೆ ಕುಮಾರ್, ಪಿಎಸ್ಐಗಳಾದ ಶಿವರಾಜ್, ಈರೇಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಶಾಂತಕುಮಾರಿ , ಉಪನ್ಯಾಸಕರಾದ ಅಬ್ದುಲ್ ವಾಯಿದ್, ಮಹಿಳಾ ಮುಖ್ಯ ಪೇದೆ ಗಂಗಮ್ಮ , ಹಾಗೂ ಪೋಲಿಸ್ ಪೇದೆಗಳಾದ ಸಂತೋಷ್, ಪ್ರಭುರಾಜ್, ಶಂಕರಣ್ಣ, ರಘು, ತಿಲಕ್ ರಾಜ್ ಸೇರಿದಂತೆ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಇದ್ದರು…

