ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಚಳ್ಳಕೆರೆ ನಗರದಲ್ಲಿ ಅಧಿಕಾರಿಗಳು ಮನಸೋ ಇಚ್ಛೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇನ್ನು ಪ್ರತಿಯೊಂದು ಸಾರ್ವಜನಿಕರ ಕಡತಗಳಿಗೂ ತಿಂಗಳಾನುಗಟ್ಟಲೆ ಅಲಿಯುವಂತ ಪರಿಸ್ಥಿತಿ ಬಂದೋದಗಿದೆ,
ಇನ್ನೂ ಪ್ರತಿ ಕೆಲಸಗಳಿಗೂ ಪ್ರತಿ ಸಾರ್ವಜನಿಕ ಕೆಲಸಗಳಿಗೆ ಲಂಚ ಎಂಬ ಕೂಪಕ್ಕೆ ಸಾರ್ವಜನಿಕರು ಸಿಲುಕಿದ್ದಾರೆ,
ನಗರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಆದರೆ ಸ್ಥಳೀಯ ಶಾಸಕರು ಇದ್ಯಾವುದು ನಮಗೆ ಸಂಬಂಧ ಇಲ್ಲ ಎಂಬಂತೆ ಬಂದು ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ನಗರಸಭೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ , ಹೀಗೆ ಹಲವು ಸಾರ್ವಜನಿಕ ಸಂಪರ್ಕಿಸುವ ಸರ್ಕಾರಿ ಇಲಾಖೆಗಳು ಭ್ರಷ್ಟಾಚಾರದಲ್ಲಿ ತೊಡಗಿವೆ ಆದ್ದರಿಂದ ಇಲ್ಲಿ ಶಾಸಕರ ಮಾತಿಗೆ ಕಿಮ್ಮತ್ತು ಇಲ್ಲದೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ಸುರೇಶ್,ರಾಮದಾಸ್, ಸೋಮಶೇಖರ್ ಮಂಡಿಮಠ , ಹಾಗು ಇನ್ನಿತರರು ಹಾಜರಿದ್ದರು.

