ನಾಯಕನಹಟ್ಟಿ: ಮನೆಯೇ ಮೊದಲ ಪಾಠ ಶಾಲೆ, ತಾಯಿ ಮೊದಲ ಗುರು, ತಾಯಿಯು ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಭಾಷೆ ಸಂಸ್ಕೃತಿಯನ್ನು ಕಲಿಸಬೇಕು ಎಂದು ರೇಖಲಗೆರೆ ಶಿಕ್ಷಕ ಕೆ.ಟಿ.ನಾಗಭೂಷಣ್ ಹೇಳಿದರು….


ಹೋಬಳಿ ಮಲ್ಲೂರುಹಳ್ಳಿ ಶ್ರೀ ಮೂಗಬಸವೇಶ್ವರ ಹೈ-ಟೆಕ್ ಶಾಲೆಯಲ್ಲಿ ಹಮ್ಕಿಕೊಂಡಿದ್ದ ಅಕ್ಷರ ಅಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು…

ಮಕ್ಕಳಿಗೆ ಮನೆಯಲ್ಲಿಯೇ ಮೊದಲು ಅಕ್ಷರ ಅಭ್ಯಾಸ ಮಾಡಿಸಿದರೆ, ಶಾಲೆಗೆ ಸೇರಿದ ಮೇಲೆ ಮಕ್ಕಳಿಗೆ ಅಕ್ಷರದ ಜ್ಣಾನ ಹೆಚ್ಚುತ್ತದೆ. ಕಲಿಕೆಯ ಮೇಲೆ ಆಸಕ್ತಿ ಮಕ್ಕಳಿಗೆ ಮೂಡುತ್ತದೆ ಎಂದು ಹೇಳಿದರು.


ಶಾಲೆಗೆ ಬರುವ ಮೊದಲೇ ಮಕ್ಕಳಿಗೆ ಅಕ್ಷರದ ಬಗ್ಗೆ ಜ್ಣಾನ ಇರಬೇಕು. ಮನೆಗಳಲ್ಲಿ ಬಳಸುವ ಭಾಷೆ ಮಕ್ಕಳ ಬಹಳ ಪರಿಣಾಮ ಬೀರುತ್ತದೆ, ಮನೆಯಲ್ಲಿ ಕೆಟ್ಟ ಭಾಷೆಯನ್ನು ಬಳಸಬಾರದು, ಮನೆಯಲ್ಲಿ ಹೇಗೆ ಭಾಷೆ ಬಳಸುತ್ತಿವೋ ಅದೇ ರೀತಿ ಮಕ್ಕಳ ಭಾಷೆ ಜ್ಞಾನ ಬೆಳೆಯುತ್ತದೆ ಎಂದು ತಿಳಿಸಿದರು.


ಶಾಲೆಯ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿ ನಾಯಕನಹಟ್ಟಿ ಹೋಬಳಿಯಲ್ಲಿ ತೆಲುಗು ಭಾಷೆಯನ್ನು ಮಾತನಾಡುತ್ತಾರೆ.

ಇದು ಮಕ್ಕಳ ಶಿಕ್ಷಣಕ್ಕೆ ಪೆಟ್ಟು ಬೀಳಲಿದೆ. ಮನೆಯಲ್ಲಿ ಮಕ್ಕಳ ಜೊತೆ ತಂದೆ-ತಾಯಿಯು ಕನ್ನಡ ಭಾಷೆಯನ್ನು ಮಾತನಾಡಬೇಕು. ಮಕ್ಕಳು ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ ಎಂದರು.

ಈ ವೇಳೆ ಪುರೋಹಿತರಾದ ಮಹಾಂತೇಶ್ ನಾಯಕನಹಟ್ಟಿ, ಮುಖ್ಯಶಿಕ್ಷಕಿ ಸುನೀತಮ್ಮ, ಶಿಕ್ಷಕರಾದ ಪಾಲಯ್ಯ, ಶ್ವೇತಾ, ನಾಗವೇಣಿ, ಶಿಲ್ಪ, ಗುರುಸ್ವಾಮಿ, ಲಕ್ಷ್ಮೀ, ಪಾಲಾಕ್ಷ ಇದ್ದರು.

Namma Challakere Local News
error: Content is protected !!