ಚಳ್ಳಕೆರೆ : ಯಾವುದೇ ಇಲಾಖೆ ಕೆಲಸ ಕಾರ್ಯಗಳು ನಿರ್ವಹಿಸುವಂತ ಸಾಮರ್ಥ್ಯ ಕಂದಾಯ ಇಲಾಖೆಗಿದೆ ಹಾಗಾಗಿ ಕಂದಾಯ ಇಲಾಖೆಯನ್ನು ಮಾತೃ ಇಲಾಖೆ ಎಂದು ಕರೆಯುತ್ತಾರೆ ಸಾರ್ವಜನಿಕರು ತಮ್ಮ ದಿನನಿತ್ಯದ ಅದೆಂತದೇ ಅಹವಾಲನ್ನು ಕಂದಾಯ ಇಲಾಖೆಗೆ ಸಿಬ್ಬಂದಿಗೆ ನೀಡಿದರೆ ಅದನ್ನು ಗೌರವ ಪೂರ್ವಕವಾಗಿ ಸ್ವೀಕರಿಸಿ ಉಳಿದ ಇಲಾಖೆಯ ನೌಕರರ ಸಮನ್ವಯ ಮಾಡಿ ಸಮಾಜದಲ್ಲಿ ಕಷ್ಟದಲ್ಲಿರುವಂತಹ ನಾಗರೀಕರ ನೆರವಿಗೆ ಕಂದಾಯ ಇಲಾಖೆ ಅಧಿಕಾರಿ ನೌಕರರಗಳು ಮುಂದಾಗಬೇಕೆಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಅವರು ತಾಲೂಕು ಕಚೇರಿಯಲ್ಲಿ ಕಂದಾಯ ದಿನದ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು ಚಳ್ಳಕೆರೆ ತಾಲೂಕಿನ ಕಂದಾಯ ಇಲಾಖೆ ಸಿಬ್ಬಂದಿಗಳ ಹೊಣೆಗಾರಿಕೆ ಹಾಗೂ ಪರಿಶ್ರಮದಿಂದ ಈಗಾಗಲೇ 48 ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ ಹಾಗೆಯೇ ಚಿತ್ರದುರ್ಗ ಜಿಲ್ಲೆಗೆ ಭೂಮಿ ಮತ್ತು ಸಕಾಲ ಯೋಜನೆಯಲ್ಲಿ ಮೂರನೇ ಶ್ರೇಯಾಂಕ ಬರಲು ಚಳ್ಳಕೆರೆ ತಾಲೂಕಿನ ಕೊಡುಗೆ ಬಹಳಷ್ಟಿದೆ ರಾಜ್ಯದಲ್ಲಿಯೇ ಎರಡನೇ ದೊಡ್ಡ ತಾಲೂಕು ಜಿಲ್ಲೆಯಲ್ಲಿ ಅತಿಹೆಚ್ಚಿನ ಅರ್ಜಿಗಳು ತಾಲೂಕಿನಲ್ಲಿ ವಿಲೇವಾರಿಯಾಗುತ್ತವೆ
ಇನ್ನು ತಾಲೂಕಿನ ಕೆಲ ಹಳ್ಳಿಗಳಲ್ಲಿ ಸರ್ಕಾರದ ಸಂಪರ್ಕಕ್ಕೆ ಬಾರದೆ ಇರುವ ಹಲವು ನಾಗರೀಕರನ್ನು ಗುರುತಿಸಿ ಇವರುಗಳಿಗೆ ಸರ್ಕಾರದ ಸೌಲಭ್ಯಗಳನ್ನು ಶೇಕಡ ನೂರರಷ್ಟು ನೀಡಲು ಕಂದಾಯ ಇಲಾಖೆಯ ನೌಕರರುಗಳು ಮುಂದಾಗಬೇಕು,
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಸರ್ಕಾರಿ ಸೌಲಭ್ಯಗಳು ದೊರೆಯಬೇಕು ಚಳ್ಳಕೆರೆ ತಾಲೂಕಿನಲ್ಲಿರುವ ಕಂದಾಯ ಇಲಾಖೆಯ ಸಿಬ್ಬಂದಿಗಳ ಕಾರ್ಯವೈಕರಿ ಅನನ್ಯಾವಾಗಿದ್ದು ಈ ದಿನ ಎಲ್ಲ ನೌಕರರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ರಂಗನಾಥ್ ಮಾತನಾಡಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕೊಡುವಂತಹ ಕೆಲವು ಸೌಲಭ್ಯಗಳನ್ನು ಮತ್ತು ಅಗತ್ಯವಿರುವಂತ ಸಿಬ್ಬಂದಿಯನ್ನು ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಗ್ರೇಡ್ 2 ತಹಶೀಲ್ದಾರ್ ಸಂಧ್ಯಾ, ಸರ್ಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗೇಗೌಡ, ಸಿರಸ್ತೆದಾರ್ ಸದಾಶಿವಪ್ಪ, ಶಕುಂತಲಾ, ಗೀರೀಶ್, ಶಿವಾಜಿ, ನಗರಸಭಾ ಸದಸ್ಯ ಮಲ್ಲಿಕಾರ್ಜುನ್ ಮಾತನಾಡಿ, ವಿಶಿಷ್ಟ ಸೇವೆ ಸಲ್ಲಿಸಿರುವ ಅಂತ ನೌಕರರಗಳಿಗೆ ಪ್ರಶಸ್ತಿ ಪತ್ರ ನೆನಪಿನ ಕಾಣಿಕೆ ಕೊಡುವುದರೊಂದಿಗೆ ಗೌರವಿಸಿದರು.