ಚಳ್ಳಕೆರೆ : ದೇಶದ ವೀರರು ಗಡಿಯಲ್ಲಿ ಹೋರಾಡದೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜೀವ ಉಳಿಸಲು ಮತ್ತು ಜೀವಿತಾವಧಿಯನ್ನು ಸುಧಾರಿಸಲು ಸಮರ್ಪಿತವಾಗಿ ಕೆಲಸ ಮಾಡುವವರನ್ನು ನಾವು ವೈದ್ಯರು ಎಂದು ಕರೆಯುತ್ತೇವೆ ಎಂದು ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ ಹೇಳಿದ್ದಾರೆ.

.
ಅವರು ನಗರದ ತಾಲೂಕು ಸಾರ್ವಜನಿಕ ಆಸ್ವತ್ರೆಯಲ್ಲಿ ಆಯೋಜಿಸಿದ್ದ ವೈಧ್ಯರ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಹಿರಿಯ ವೈಧ್ಯಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,


ಭಾರತದಲ್ಲಿ ಪ್ರತಿ ವರ್ಷ ಜುಲೈ 01 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಸಾಂಕ್ರಾಮಿಕ ಪರಿಸ್ಥಿತಿಯಿರುವಾಗ, ಸಾಮಾನ್ಯ ಜನರಿಗಾಗಿ ವೈದ್ಯರು ಯಾವಾಗಲೂ ಅದರ ವಿರುದ್ಧ ಹೋರಾಡಲು ಮೊದಲು ಬರುತ್ತಾರೆ,

ಮುಂತಾದ ಅನೇಕ ಸಾಂಕ್ರಾಮಿಕ ಪರಿಸ್ಥಿತಿಗಳ ಸಮಯದಲ್ಲಿ ಡಾಕ್ಟರ್ ಸೇವೆ ಅನನ್ಯ ವೈದ್ಯರು ಸಾರ್ವಜನಿಕ ಸುರಕ್ಷತೆ ಮತ್ತು ಅವರ ಆರೋಗ್ಯಕ್ಕಾಗಿ ಮುಂಚೂಣಿಯಲ್ಲಿರುತ್ತಾರೆ ಎಂದರು.


ಈದೇ ಸಂಧರ್ಭದಲ್ಲಿ ತಾಲೂಕು ಸಾರ್ವಜನಿಕ ಆಸ್ವತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್, ಡಾ.ಮಂಜುನಾಥ್, ಡಾ.ತಿಪ್ಪೆಸ್ವಾಮಿ, ಡಾ.ಅಮಿತ್‌ಗುಪ್ತ, ಡಾ.ಆದಿಮನಿ, ಡಾ.ಜಯಲಕ್ಷ್ಮಿ, ಡಾ.ಓಂಕಾರಮೂರ್ತಿ, ಡಾ.ಶಮಾಪರ್ವಿನ್, ಡಾ.ಪ್ರಜ್ವಲ್ ಧನ್ಯ, ಡಾ.ಸಾಯಿನಾಗ ಜ್ಯೋತಿ, ಡಾ.ಕಾಶಿ, ಡಾ.ವೆಂಕಟೇಶ್, ಡಾ.ರೇವತಿ, ಶ್ರೀದೇವಿ, ಭಾರತಿ, ಕಿರಣ್ ಕುಮಾರ್, ಬೋರಯ್ಯ, ನಾಗರತ್ನಮ್ಮ, ಮಂಜುಳಾ, ನಿರ್ಮಾಲಾ ಇತರರು ಇದ್ದರು.

About The Author

Namma Challakere Local News
error: Content is protected !!