ಚಳ್ಳಕೆರೆ :
ಚಿತ್ರದುರ್ಗ: ತಹಶೀಲ್ದಾರ್ ಗೆ ಮುತ್ತಿಗೆ ಹಾಕಿ
ಪ್ರತಿಭಟಿಸಿದ ರೈತರು
ಚಿತ್ರದುರ್ಗದ ನಂದೀಪುರದಲ್ಲಿ ಅಡಿಕೆ ತೋಟದಲ್ಲಿರುವ
ಮರಗಳನ್ನು, ಕೆರೆ ಒತ್ತುವರಿ ಹೆಸರಿನಲ್ಲಿ ಕಡಿದು ಹಾಕುತ್ತಿದ್ದಾರೆಂದು
ಆರೋಪಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು
ಪ್ರತಿಭಟಿಸಿದರು.
ನಂತರ ತಹಶೀಲ್ದಾರ್ ಬಳಿ ಬಂದು ಅವರಿಗೆ
ಮುತ್ತಿಗೆ ಹಾಕಿ ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆಂದು ನಮ್ಮ
ತೋಟಗಳಲ್ಲಿರುವ, ಅಡಿಕೆ ಮತ್ತು ತೆಂಗಿನ ಮರಗಳನ್ನು
ಕಡಿಯದಂತೆ ನೀರಾವರಿ ಇಲಾಖೆಯವರಿಗೆ ಸೂಚಿಸಬೇಕೆಂದು
ಪಟ್ಟು ಹಿಡಿದರು.

