ಚಳ್ಳಕೆರೆ :
ಚಿತ್ರದುರ್ಗ: ತಂದೆಯನ್ನು ನಿರಾಶ್ರಿತರ ಕೇಂದ್ರಕ್ಕೆ
ಸೇರಿಸಿದ ಪಾಪಿ ಮಕ್ಕಳು
ತಂದೆ ಮಕ್ಕಳ ನಡುವೆ ಆಸ್ತಿ ಹಂಚಿಕೆ ವ್ಯತ್ಯಾಸದ ವಿವಾದದ ಹಿನ್ನಲೆ,
ವಯಸ್ಸಾದ ತಂದೆಯನ್ನ ಸಾಕದೆ ಮನೆಯಿಂದ ಹೊರಗಿಟ್ಟ ಘಟನೆ
ಚಿತ್ರದುರ್ಗ ನಗರದ ಚೋಳಗುಡ್ಡ ಬಡಾವಣೆಯಲ್ಲಿ ನಡೆದಿದೆ.
ತಂದೆಯನ್ನು ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟು ಬಂದಿದ್ದು ಅಧಿಕಾರಿಗಳು
ಮಕ್ಕಳ ಮನೆ ಪತ್ತೆ ಹಚ್ಚಿ ವೃದ್ಧನನ್ನ ಕರೆದೊಯ್ದು ಮನೆಸೇರಿಸಿದ್ದಾರೆ.
ಮಾಡನಾಯಕನಹಳ್ಳಿ ಮೂಲದ ಬಸಪ್ಪ (85) ಎಂದು ಇವರನ್ನು
ಗುರುತಿಸಲಾಗಿದ್ದು, ಇವರಿಗೆ ಇಬ್ಬರು ಗಂಡು, ಒರ್ವ ಹೆಣ್ಣು
ಮಗಳಿದ್ದೂ ತಂದೆಯನ್ನ ಹೊರ ಹಾಕಿ ಆಮಾನವೀಯತೆ
ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಕುಟುಂಬದವರಿಗೆ
ಎಚ್ಚರಿಕೆ ನೀಡಿದ್ದಾರೆ.

