ಚಳ್ಳಕೆರೆ :
ಚಿತ್ರದುರ್ಗ: ತಾರತಮ್ಯ ಮಾಡಬೇಡಿ ನೀತಿ ಪಾಠ
ಮಾಡಿದ ಮಾಜಿ ಅಧ್ಯಕ್ಷ
ಸಾರ್ವಜನಿಕರ ಕೆಲಸ ಮಾಡುವಾಗ ತಾರತಮ್ಯ ಮಾಡಬಾರದು,
ಕೆಲವರಿಗೆ ಕೆಲಸ ಮಾಡಿಕೊಟ್ಟು ಇನ್ನು ಕೆಲವರಿಗೆ ಮಾಡದೆ
ಹೋದರೆ ಆಡಳಿತದ ಕ್ರಮವಲ್ಲ, ಇ ರೀತಿ ಮಾಡಬಾರದೆಂದು
ನಗರಸಭೆ ಹಿರಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಸರ್ದಾರ್
ಅಹಮದ್ ಪಾಷಾ ಆಯುಕ್ತರು, ಅಧ್ಯಕ್ಷರು ಹಾಗು ಉಪಾಧ್ಯಕ್ಷರಿಗೆ
ನೀತಿ ಪಾಠ ಹೇಳಿದರು. ಚಿತ್ರದುರ್ಗದ ನಗರಸಭೆ ಕೌನ್ಸಿಲ್
ಸಭಾಂಗಣದಲ್ಲಿಂದು ನಡೆದ ಸಮಾನ್ಯ ಸಭೆಯಲ್ಲಿ ಮಾತಾಡಿ,
ಸದಸ್ಯರು ಹಾಗೂ ಆಡಳಿತ ವರ್ಗ ಹೊಂದಿಕೊಂಡು ಕೆಲಸ
ಮಾಡಬೇಕು. ಆಗ ಮಾತ್ರ ಕೆಲಸ ಆಗುತ್ತದೆ ಎಂದರು.

