ಚಳ್ಳಕೆರೆ : ಮೌಡ್ಯಚಾರಣೆಗಳು ನಿಲ್ಲಬೇಕು, ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಬೇಕು ಬಾಲ್ಯವಿವಾಹಗಳು ತಡೆಯಲು ಜಾಗೃತಿ ಹಾಗಬೇಕು ಎಂದು
ಚಳ್ಳಕೆರೆ ಡಿವೈ ಎಸ್ ಪಿ ಟಿ.ಬಿ.ರಾಜಣ್ಣ ಹೇಳಿದರು.

ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗೋಪನಹಳ್ಳಿ ಗ್ರಾಮಪಂಚಾಯಿತಿ, ಹಾಗೂ ಪೋಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ, ಶಿಕ್ಷಣ ಇಲಾಖೆಯ ವತಿಯಿಂದ ಬಾಲ್ಯ ವಿವಾಹ ನಿಷೇದ ಮತ್ತು ಅದರ ಅಡ್ಡ ಪರಿಣಾಮ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿ, ಇನ್ನು ಹಲವು ಕಡೆಗಳಲ್ಲಿ ಮೂಢನಂಬಿಕೆಗಳು ಚಾಲ್ತಿಯಲ್ಲಿದ್ದು ಇಂತಹ ಮೌಡ್ಯಕ್ಕೆ ಬಲಿಯಾಗದೆ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿ, ಶಿಕ್ಷಣವಂತರಾದರೆ ಇಂತಹ ಬಾಲ್ಯ ವಿವಾಹ ಕನಿಷ್ಠ ಪದ್ಧತಿಗಳನ್ನು ತೊಡೆದು ಹಾಕಬಹುದು.. ಉದಾಹರಣೆ ಅಂದ್ರೆ ಇದೇ ಗ್ರಾಮದ ಬಾಲಕಿ ಶಿಕ್ಷಣ ಕಲಿತಿರುವಾಗಲೇ ಬಾಲ್ಯ ವಿವಾಹಕ್ಕೆ ತಮಗೆ ರಕ್ಷಣೆ ಮಾಡಬೇಕಾದವರೇ ಬಾಲ್ಯ ವಿವಾಹ ಮಾಡಲು ಮುಂದಾದಗ ಆ ಬಾಲಕಿ ಎಲ್ಲರ ವಿರುದ್ಧ ಪ್ರತಿಭಟಿಸಿರುವುದು ಶ್ಲಾಘನೀಯ…

ಮಕ್ಕಳು ಶಿಕ್ಷಣವಂತರಾಗಿ ಅನಿಷ್ಟ ಪದ್ಧತಿಗಳ ವಿರುದ್ಧ ಪ್ರತಿಭಟಿಸಿದಾಗ ಮಾತ್ರ ಬಾಲ್ಯ ವಿವಾಹದಂತಹ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಬೇಕು ಶಿಕ್ಷಣವೇ ಶಕ್ತಿಯಾಗಿದೆ, ಶಿಕ್ಷಣ ವಿದ್ದರೆ ಎಲ್ಲವೂ ಸಿಗುತ್ತೆ ಎಲ್ಲವೂ ಸಾಧ್ಯವಾಗುತ್ತೆ ಎಂದರು..

ಗ್ರಾಮ ಪಂಚಾಯತಿ ಅಧ್ಯಕ್ಷೆ ಭವಾನಿ ಸುರೇಶ್ ಮಾತನಾಡಿ, ಇಂತಹ ಬಾಲ್ಯ ವಿವಾಹವನ್ನು ತಡೆಗಟ್ಟಲು ಗ್ರಾಮದಲ್ಲಿ ಎಲ್ಲರೂ ಒಗ್ಗೂಡಬೇಕು. ಇಂತಹ ಪ್ರಕರಣಗಳು ನಡೆದಾಗ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಆದ್ದರಿಂದ ಬಾಲ್ಯ ವಿವಾಹವನ್ನು ತಡೆಗಟ್ಟಲು ಅಧಿಕಾರಿಗಳು ಹೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು…

ಜಿಲ್ಲಾ ರಕ್ಷಣಾ ಅಧಿಕಾರಿ ಗೀತಾ ಮಾತನಾಡಿ, ಬಾಲ್ಯ ವಿವಾಹ ನಿಷೇದ ಕುರಿತು ಎಲ್ಲರಿಗೂ ತಿಳಿದ ವಿಷಯ ಆದರೆ ವಿಷಯ ತಿಳಿದು ಇದ್ದರೂ ರಕ್ಷಣೆ ಮಾಡುವು ಕುಟುಂಬವೆ ಬಾಲ್ಯ ವಿವಾಹ ಮಾಡಲು ಮುಂದಾದಗ ಆ ಬಾಲಕಿ ಎಲ್ಲಿಗೆ ಹೋಗಬೇಕು, ಆ ಬಾಲಕಿ ವಿರೋಧ ವ್ಯಕ್ತ ಪಡಿಸುತ್ತಿದ್ದರೆ ಜನ ನಿಂತು ನೋಡುತ್ತಿರಲ್ಲಾ ಯಾರು ಆ ಬಾಲ್ಯ ವಿವಾಹ ತಡೆಯಲು ಮುಂದಾಗಲಿಲ್ಲಾ.

ಇಂತಹ ಸಮಯದಲ್ಲಿ ಎಲ್ಲರೂ ಪ್ರತಿಭಟಸಬೇಕು ಇಂತಹ ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಕರೆ ಮಾಡಿ ಅಧಿಕಾರಿಗಳು ಸ್ಥಳಕ್ಕೆ ಬರ್ತಾರೆ ಎಂದರು .

ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿ ರೇಖಾ ಮಾತನಾಡಿ,ಅಜ್ಜಿ ಹೇಳಿದರು ಅಜ್ಜ ಮೃತ ಪಡುತ್ತಾನೆ ಕೊನೆ ಘಳಿಗೆಯಲ್ಲಿ ಮೊಮ್ಮಗಳ ಮಧುವೆ ನೋಡಬೇಕು ಅಥವಾ ಯವುದೋ ಒತ್ತಡಕ್ಕೆ ಮಣಿದು ಬಾಲ್ಯ ವಿವಾಹ ಮಾಡುತ್ತಾರೆ ಅಲ್ಲಿಂದನೆ ಬಾಲಕಿಗೆ ಸಮಸ್ಯೆ ಉದ್ಭವಾಗುತ್ತೆ.ಜಿಲ್ಲೆಯಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚ ಬಾಲ್ಯ ವಿವಾಹ ಪ್ರಕರಣಗಳು ನಡೆಯಿತ್ತಿವೆ. ಇಲ್ಲಿಗೆ ನಿಲ್ಲಬೇಕು ಎಂದರು…..

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಮಾತನಾಡಿ, ಬಾಲ್ಯ ವಿವಾಹ ಮಾಡುವುದರಿಂದ ಮಕ್ಕಳಲ್ಲಿ ಆರೋಗ್ಯದ ಸಮಸ್ಯೆ ಖಾಡಿ ಕೊನೆಗೆ ಬಾಲಕಿ ಗರ್ಭಿಣಿಯಾಗಿ ಹೆರಿಗೆ ಆಗುವ ಸಮಯದಲ್ಲಿ ಸಮಸ್ಯೆಗಳು ಉದ್ಭವಿಸಿ ತಾಯಿ ಮಗು ಇಬ್ಬರು ಮೃತಪಡುವ ಸಂಬಂವ ಇರುತ್ತದೆ, ಅಷ್ಟೆ ಅಲ್ಲದೆ ಬಾಲ್ಯ ವಿವಾಹ ಮಾಡುವುದರಿಂದ ಮಾಡಿದವರು ಜೊತೆಯಲ್ಲಿ ಇದ್ದ ಎಲ್ಲರೂ ಶಿಕ್ಷೆ ಅನುಭವಿಸಬೇಕಾಗುತ್ತದೆ, ಬಾಲ್ಯ ವಿವಾಹಗಳ ತಡೆಯಲು ಎಲ್ಲರೂ ಪ್ರಯತ್ನ ಪಡೋಣ ಎಂದರು.

ಬಿಇ.ಕೆಎಸ್. ಸುರೇಶ್ ,ಗ್ರಾಮ ಪಂಚಾಯತಿ ಸದಸ್ಯ ನಾಗರಾಜ್, ಲೀಲಾವತಿ, ಸಮಾಜ ಕಲ್ಯಾಣಾಧಿಕಾರಿ ದೇವ್ಲಾನಾಯ್ಕ್, ವೈದ್ಯಾಧಿಕಾರಿ ಬಿಂದು, ಗೋಪನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಎನ್ ಆರ್ ತಿಪ್ಪೇಸ್ವಾಮಿ,. ಕಾರ್ಯಕ್ರಮ ಕುರಿತು ಮಾತನಾಡಿದರು..

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಹಾಲಿಂಗಪ್ಪ, ಶಿವಣ್ಣ, ರೆಡ್ಡಿ ಹಳ್ಳಿ ಮುಖಂಡರಾದ ಶಿವಣ್ಣ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜುನಾಥ್ ಸ್ವಾಮಿ, ಸಿಪಿಐ.ಈರೇಶ್, ಮಹಿಳಾ ಮುಖ್ಯಪೇದೆ ಗಂಗಮ್ಮ, ಸೇರಿದಂತೆ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಇದ್ದರು……

About The Author

Namma Challakere Local News
error: Content is protected !!