ಚಳ್ಳಕೆರೆ :
ಚಿತ್ರದುರ್ಗ : ರೈತ ಮಹಿಳೆಯರಿಗೆ ಕೋಳಿ ಮರಿ ವಿತರಣೆ
ಚಿತ್ರದುರ್ಗದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ರೈತ ಮಹಿಳೆಯರಿಗೆ
ತಲಾ 20 ರೂಪಾಯಿಯಂತೆ ಕೋಳಿ ಮರಿಗಳ ವಿತರಣೆ
ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಶಾಸಕ
ಕೆ ಸಿ ವೀರೇಂದ್ರ ಪಪ್ಪಿ ರೈತ ಮಹಿಳೆಯರಿಗೆ ಕೋಳಿ ಮರಿಗಳನ್ನ
ವಿತರಿಸಿ ಮಾತಾಡಿ, ಇಲಾಖೆ ವತಿಯಿಂದ ರೈತ ಮಹಿಳೆಯರ
ಏಳಿಗೆಗೆ ಕೋಳಿ ಮರಿಗಳನ್ನ ವಿತರಣೆ ಮಾಡಲಾಗುತ್ತಿದೆ. ರೈತ
ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಸದಾ
ಬದ್ದವಾಗಿದ್ದು, ರೈತ ಮಹಿಳೆಯರು ಉತ್ತಮ ರೀತಿಯಲ್ಲಿ ಇದರ
ಸದುಪಯೋಗ ಪಡೆಯಬೇಕು ಎಂದರು.

