ಚಳ್ಳಕೆರೆ : ಬಯಲು ಸೀಮೆ ಎಂಬ ಹಣೆಪಟ್ಟಿ ಕಟ್ಟಿಕೊಂಡು ಪ್ರದೇಶದಲ್ಲಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ಮಾದರಿ ರೈತನಾದ ಪದವೀಧರ ರೈತ.

ಹೌದು ಇದು ಚಳ್ಳಕೆರೆ ತಾಲೂಕಿನ ನಾಯಕನಟ್ಟಿ ಗ್ರಾಮದ ತಿಪ್ಪೇಸ್ವಾಮಿ ಓದಿದ್ದಿ ಎಂ ಎಸ್ಸಿ ಹಾಗೂ ಪ್ಯಾರಮೇಡಿಕಲ್ ಡಿಪ್ಲೊಮಾ ವ್ಯಾಸಂಗ ಮಾಡಿ ಹೈಟಿ ಬಿಟಿ ಕಂಪನಿಗಳಲ್ಲಿ ರಾಜ್ಯ ಹೊರ ರಾಜ್ಯದಲ್ಲಿ ಉದ್ಯೋಗ ಮಾಡಿ ನಂತರ ಕೋವಿಡ್ 19 ಲಾಕ್ ಡೌನ್ ಸಂದರ್ಭದಲ್ಲಿ ಊರು ಸೇರಿ ಉದ್ಯೂಗ ಬಿಟ್ಟು ತಂದೆಯ ಸಹಕಾರದೊಂದಿಗೆ ಹಾಗೂ ತೋಟಗಾರಿಕೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸುಮಾರು ಎರಡು ಎಕರೆ ಭೂಮಿಯಲ್ಲಿ ನಿಂಬೆ.ಮಾವು. ಪೇರಲ.ಕರಿಬೇವು.ನುಗ್ಗೆ.ಅಡಿಕೆ. ತೆಂಗು.ನೇರಲೆ.ಬಟರ್ ಪ್ರೂಟ್.ಸಿದ್ದು ಹಲಸು.ಸೀತಾ ಫಲ. ಅಂಜೂರ.ರಾಮ ಫಲ.ಬೆಟ್ಟದ ನೆಲ್ಲಿ ಜಮೀನಿನ ಸುತ್ತ ಅರಣ್ಯ ಗಿಡಗಳಾದ ಸಿಲ್ವರ್ .ಇತರ ಮರಗಳನ್ನು ಬೆಳೆಯಲಾಗಿದೆ.

ಬೆಳೆಗಳಿಗೆ ಯಾವುದೇ ರಸಯನಿಕ ಗೊಬ್ಬರ ಹಾಗೂ ಕ್ರಿಮಿ ನಾಷಕ ಔಷಧಿ ಬಳಕೆ ಮಾಡದೆ ಸಾವಯವ ಕೃಷಿ ಪದ್ದತಿ ಅಳವಡಿಸಿ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯಲಾಗುತ್ತಿದೆ.

ಮಡಕೇರಿ.ಕೊಡಗು.ತುಮಕೂರು ಸೇರಿದಂತೆ ವಿವಿಧ ಕಡೆಗಳಿಂದ ಹಣ್ಣಿನ ಸಸಿಗಳನ್ನು ತಂದು ಬೆಳೆಸಲಾಗಿದೆ .
ನಾವು ಈ ತೋಟಕ್ಕೆ ಪ್ರವೇಶ ಮಾಡಿದರೆ ಯಾವುದೋ ಅರಣ್ಯ ಪ್ರದೇಶಕ್ಕೆ ಪ್ರವೇಶ ಮಾಡುವಂತೆ ಬಾಸವಾಗುತ್ತದೆ.

About The Author

Namma Challakere Local News
error: Content is protected !!