ಚಳ್ಳಕೆರೆ :
ಚಿತ್ರದುರ್ಗ: ಎತ್ತಿನ ಬಂಡಿ ಏರಿ ಹೊರಟ
ಪ್ರಾಂಶುಪಾಲರು
ಚಿತ್ರದುರ್ಗದ ಓಬವ್ವ ವೃತ್ತದಲ್ಲಿ ಮೆರವಣಿಗೆಗೆ ಸರ್ಕಾರಿ ಕಲಾ
ಕಾಲೇಜು ಪ್ರಾಂಶುಪಾಲ ಪ್ರೊ. ಬಿ. ಟಿ. ತಿಪ್ಪೇರುದ್ರಸ್ವಾಮಿ
ತಮಟೆ ಬಾರಿಸಿ, ಎತ್ತಿನ ಬಂಡಿ ಏರುವ ಮೂಲಕ ಮೆರವಣಿಗೆಗೆ
ಚಾಲನೆ ನೀಡಿದರು.
ಕಾಲೇಜು ಯುವತಿಯರು ಬಣ್ಣ ಬಣ್ಣದ
ಸೀರೆಯನ್ನುಟ್ಟರೆ ಯುವಕರು ನಾವೇನು ಕಮ್ಮಿ ಇಲ್ಲ ಎಂಬಂತೆ,
ಪಂಚೆ ಶರ್ಟ್ ಗಳನ್ನ ಧರಿಸಿ ಡೊಳ್ಳು ಕುಣಿತ ವೀರಗಾಸೆ
ಸೇರಿದಂತೆ, ಹಲವು ಕಲಾ ತಂಡಗಳು ಬಣ್ಣದ ಸೀರೆಯುಟ್ಟ
ಕಾಲೇಜು ಯುವತಿಯರು ಕುಂಬಗಳನ್ನ ಹೊತ್ತು ನಗರದ ಪ್ರಮುಖ
ಬೀದಿಗಳಲ್ಲಿ ಮೆರವಣಿಗೆ ಸಾಗಿತು.

