ಚಳ್ಳಕೆರೆ : ಸರಕಾರಿ ಭೂಮಿಯಾಗಲಿ, ಖಾಸಗಿ ಜಮೀನು ಹಾಗಲಿ ವಾಸಿಸುವನೆ ಮನೆಯೊಡೆಯ ಎಂಬುದು ಸರಕಾರದ ಆದೇಶ ಆದ್ದರಿಂದ ಪ್ರತಿ ಕುಟುಂಬಕ್ಕೆ ಆಶ್ರಯ ಯೋಜನೆಯಲ್ಲಿ ನಿವೇಶನ ನೀಡುವುದು ಅಧಿಕಾರಿಗಳ ಕರ್ತವ್ಯ ಎಂದು ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಹೇಳಿದರು.
ಅವರು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಸ್ಮಶಾನ ಭೂಮಿ, ಆಶ್ರಯ ಯೋಜನೆ, ಹಾಗೂ ಗ್ರಾಮದಲ್ಲಿ ಶಾಲೆಗಳಿಗೆ, ಅಂಗನವಾಡಿಗಳಿಗೆ ಭೂಮಿ ಇಲ್ಲವೆಂಬ ದೂರುಗಳು ಬರಬಾರದು, ಆದ್ದರಿಂದ ಸ್ಥಳೀಯ ಮಟ್ಟದ ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರೀಶಿಲನೆ ನಡೆಸಿ ವರದಿ ಸಲ್ಲಿಸಬೇಕು, ಒಂದು ವೇಳೆ ಗ್ರಾಮದಲ್ಲಿ ಸ್ಮಶಾನಕ್ಕೆ ಭೂಮಿ ಇಲ್ಲದೆ ಇದ್ದರೆ ಖಾಸಗಿ ಜಮೀನು ಖರೀದಿಸಿ ಸ್ಮಶಾನ ಜಾಗ ನಿಗಧಿ ಮಾಡಿ,
ಒಂದು ವೇಳೆ ಗ್ರಾಮದಲ್ಲಿ ಸ್ಮಶಾನ ಜಾಗೂ ಆಶ್ರಯ ಭೂಮಿ ಒತ್ತುವರಿಯಾಗಿದ್ದರೆ ಕೂಡಲೇ ಪರೀಶಿಲನೆ ಮಾಡಿ ಅಧಿಕಾರಿಗಳು ತಮ್ಮ ಸ್ವಂತ ಜಾಗ ಉಳಿಸುವಾಗೆ ನಿಮ್ಮ ವ್ಯಾಪ್ತಿಯ ಸರಕಾರಿ ಆಸ್ತಿ ಕಾಪಡಬೇಕು ಎಂದರು.
ಇನ್ನೂ
ತುರುವನೂರು ಗ್ರಾಮ ಪಂಚಾಯತಿಯ ಪಿಡಿಓ. ಸಭೆಗೆ ಗೈರು ಆದ ಕಾರಣ ಅಸಮಾಧಾನ ಹೊರಹಾಕಿದ ಎಡಿಸಿ ರವರು ಸಭೆಗೆ ಬಾತದೆ ಇರುವ ಇವರು ಬೇರೆ ಗ್ರಾಮ ಪಂಚಾಯತಿ ಯವರನ್ನು ನೇಮಕ ಮಾಡಿ ಸಭೆಗೆ ಮಾಹಿತಿ ತಿಳಿಸಬೇಕು, ವಿನಃ ಕಾರಣ ಸಭೆಗೆ ಗೈರು ಹಾಗುವುದು ಸರಿಯಾದ ಕ್ರಮವಲ್ಲ ಎಂದು ಅಸಮಧಾನ ಹೊರಹಾಕಿದರು.
ತುರುವನೂರು ಹೋಬಳಿಯ
ಉಪ್ಪಾರಹಟ್ಟಿ ಗೆ ಇಲ್ಲಿಯವೆರೆಗೆ ಸ್ಮಶಾನ ಭೂಮಿ ಇಲ್ಲವಾದರೆ ಹೇಗೆ, ಇದರಿಂದ ಅಲ್ಲಿನ ಸ್ಥಳಿಯರ ಅಂತ್ಯ ಸಂಸ್ಕಾರ ಹೇಗೆ ಮಾಡುತ್ತಾರೆ, ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸುತ್ತದೆ, ಒಂದು ವೇಳೆ ಗ್ರಾಮದಲ್ಲಿ ಸರಕಾರಿ ಭೂಮಿ ಇಲ್ಲವಾದರೆ ಖಾಸಗಿ ವ್ಯಕ್ತಿಗಳಿಗೆ ಖರೀದಿಸಲು ಜಿಲ್ಲಾಡಳಿತದಲ್ಲಿ ಮೂರು ಕೋಟಿ ಹಣವಿದೆ, ಇದನ್ನು ಎಲ್ಲಾ ಅಧಿಕಾರಿಗಳ ಗಮನದಲ್ಲಿ ಇರಲಿ,
ಒಂದು ಸಾವಿರ ಜನಕ್ಕೆ ಇಪ್ಪತ್ತು ಗುಂಟೆ ಭೂಮಿ ಸ್ಮಶಾನ ಕ್ಕೆ ನಿಗಧಿ ಮಾಡಬೇಕು, ಪಿಡಿಓ ಹಾಗೂ ಗ್ರಾಮ ಸಹಾಯಕ ಜವಾಬ್ದಾರಿ ಆಶ್ರಯ ಯೋಜನೆಗೆ ಖರೀದಿ ಮಾಡುವುದು.
ಇನ್ನೂ ಸ್ಮಶಾನ ಭೂಮಿಯನ್ನು
ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲು, ಕಂದಾಯ ಅಧಿಕಾರಿಗಳು ಸರ್ವೆ ಮಾಡಿ ಪಿಡಿಓ ಗೆ ಒಪ್ಪಿಸಬೇಕು, ನಂತರ ಗ್ರಾಮಲೆಕ್ಕಾಧಿಕಾರಿಗಳು ತಮ್ಮ ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ, ಈಗೇ ಸರ್ಕಾರದ ಯೋಜನೆಗಳನ್ನು ಬಡ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಇದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಚಿತ್ರದುರ್ಗ ತಹಶಿಲ್ದಾರ್ ಗೋವಿಂದರಾಜ್, ತಾಪಂ.ಕಾರ್ಯನಿರ್ವಾಣಾಧಿಕಾರಿ ಶಶಿಧರ್, ಸಿಡಿಪಿಓ ರಾಜುನಾಯ್ಕ್,
ತಾಲೂಕು ಮಟ್ಟದ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಓ ಗಳು ಇತರರು ಇದ್ದರು.

