ಚಳ್ಳಕೆರೆ :
ಚಳ್ಳಕೆರೆ: ಸಚಿವ ಸ್ಥಾನದ ಭರವಸೆಯಿದೆ
ಕಳೆದ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗಲೇ,
ನನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು.
ಆದರೆ ಮುಂದಿನ
ದಿನಗಳಲ್ಲಿ ಕೊಡುತ್ತೇವೆಂದು ಹೈ ಕಮಾಂಡ್ ಭರವಸೆ
ನೀಡಿತ್ತು ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ ಹೇಳಿದರು.
ಚಳ್ಳಕೆರೆಯಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿ, ಈ
ಸಾರಿಯೂ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದೇನೆ. ಜಿಲ್ಲೆಯಲ್ಲಿ
ಎಲ್ಲರಿಗೂ ಒಳ್ಳೆಯ ಅಭಿಪ್ರಾಯವಿದೆ. ಸಂಕಷ್ಟದ ಸಮಯದಲ್ಲೂ
ಕೂಡ ನಾನು ಪಕ್ಷದಲ್ಲಿದ್ದು, ನಿಷ್ಠೆಯಿಂದಿದ್ದೇನೆ ಎಂದರು.

