ಚಳ್ಳಕೆರೆ :-ಚಿತ್ರದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌! ವಿಡಿಯೋ ವೈರಲ್‌

ಹಾಡು ಹೇಳ್ಳೋದು, ಡ್ಯಾನ್ಸ್‌ ಮಾಡೋದು,ಹೀಗೆ ಖಾಕಿ ತೊಟ್ಟರೂ ಸ್ವಲ್ಪ ಡಿಫರೆಂಟ್‌ ಆಗಿರುವ ಮಂಗಳೂರಿನ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌

ಚಿತ್ರದುರ್ಗದ ಐತಿಹಾಸಿಕ ಏಳು ಸುತ್ತಿನ ಕೋಟೆ ಏರುವ ಮೂಲಕ ಸಾಹಸಕ್ಕೂ ಸೈ ಎಂದು ತೋರಿಸಿದ್ದಾರೆ,

ಚಿತ್ರದುರ್ಗ ಕೋಟೆ ಎಂದರೆ ಥಟ್ಟನೆ ಎಲ್ಲರಿಗೂ ಮಂಕಿ ಮ್ಯಾನ್‌ ಎಂದೇ ಕರೆಸಿಕೊಳ್ಳುವ ಜ್ಯೋತಿರಾಜ್‌
( ಕೋತಿರಾಜ್‌) ನೆನಪಾಗುತ್ತಾರೆ. ಕೋಟೆಯ ಗೋಡೆ, ಬಂಡೆಗಳನ್ನೆಲ್ಲ ಸರಸರನೇ ಏರುವ ಇವರ ಸಾಹಸ ಮೆಚ್ಚದವರಿಲ್ಲ. ಈಗ ಜ್ಯೋತಿರಾಜ್‌ ಅವರಂತೆಯೇ ಚಿತ್ರದುರ್ಗ ಮೂಲದ ಐಪಿಎಸ್‌ ಅಧಿಕಾರಿ, ಸದ್ಯ ಮಂಗಳೂರಿನಲ್ಲಿ ಪೊಲೀಸ್‌ ಕಮಿಷನರ್‌ ಆಗಿರುವ ಶಶಿಕುಮಾರ್‌ ಕೂಡ ಕೋಟೆಯ ಗೋಡೆ ಏರಿ ಸಾಹಸ ಪ್ರದರ್ಶಿಸಿದ್ದಾರೆ

ಖುದ್ದು ಶಶಿಕುಮಾರ್‌ ಅವರ ಫೇಸ್‌ಬುಕ್‌ ಪೇಜ್‌ನಲ್ಲಿ ಜ್ಯೋತಿರಾಜ್‌ ಏರುವ ಗೋಡೆಯನ್ನು ತಾವು ಹತ್ತುತ್ತಿರುವ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. “ನಮ್ಮ ಊರು ನಮ್ಮ ಹೆಮ್ಮೆ’, “ನಮ್ಮೂರಿನಲ್ಲಿ ಮತ್ತೊಮ್ಮೆ’ ಎಂಬ ಶೀರ್ಷಿಕೆ ಕೊಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಶಶಿಕುಮಾರ್‌ ಬರಿಗೈನಲ್ಲಿ ಯಾವುದೇ ಆಸರೆ ಇಲ್ಲದೆ ಗೋಡೆ ಏರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ.

ಐಪಿಎಸ್‌ ಅಧಿಕಾರಿಯ ಸಾಹಸಕ್ಕೆ ಸ್ಥಳದಲ್ಲಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.

About The Author

Namma Challakere Local News
error: Content is protected !!