ಚಳ್ಳಕೆರೆ : ರಾಜಸ್ಥಾನದ ಉದಯಪುರದಲ್ಲಿ ಹಾಡ ಹಗಲೇ ಹಿಂದೂ ವ್ಯಕ್ತಿಯ ಶಿರಚ್ಛೇದನ ಮಾಡಿ ಭಾರತದ ಪ್ರಧಾನಿಗಳನ್ನು ಸಹ ಹತ್ಯೆ ಮಾಡುವುದಾಗಿ ವೀಡಿಯೋ ಮಾಡಿ ವಿಕೃತಿ ಮೆರೆದ ಇಸ್ಲಾಮಿಕ್ ಜಿಹಾದಿಗಳ ನೇಣುಗಂಬಕ್ಕೆ ಏರಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಭಜರಂಗದಳದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಅವರು ನಗರದ ತಾಲೂಕು ಕಚೇರಿಯಲ್ಲಿ ಇಂದು ತಹಶೀಲ್ದಾರ್ ಎನ್.ರಘುಮೂರ್ತಿಗೆ ಮನವಿ ನೀಡಿ ಮಾತನಾಡಿದ ವಿಶ್ವ ಹಿಂದು ಪರಿಷತ್ ಭಜರಂಗದಳದ ತಾಲೂಕು ಅಧ್ಯಕ್ಷ ಡಾ.ಮಂಜುನಾಥ್, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಕೋಮು ಗಲಭೆಯನ್ನು ಸೃಷ್ಠಿಸುವ ಉದ್ದೇಶದಿಂದ ಪಾಕಿಸ್ತಾನದ ಉಗ್ರ ಬೆಂಬಲಿತವೆAದು ಹೇಳಲಾಗುತ್ತಿರುವ ರಾಜಸ್ಥಾನದ ಇಬ್ಬರು ಮುಸಲ್ಮಾನ ಜಿಹಾದಿ ಉಗ್ರಗಾಮಿ ಸಹೋದರರು ರಾಜಸ್ಥಾನದ ಉದಯಪುರದಲ್ಲಿ ಹಾಡ ಹಗಲೇ ಕನ್ನಯ್ಯಲಾಲ್ ಎನ್ನುವ ಟೈಲರ್ ವೃತ್ತಿಮಾಡುವ ಬಡ ಹಿಂದೂವಿನ ಶಿರಚ್ಛೇದನವನ್ನು ಮಾಡಿ ಇಡೀ ದೇಶವೇ ಬಿಚ್ಚಿಬೀಳುವಂತೆ ಮಾಡಿದ್ದಾರೆ.
ಅಲ್ಲದೇ ಅದೇ ಸ್ಥಳದಲ್ಲಿ ಕುಳಿತು ಭಾರತದ ಪ್ರಧಾನಿಗಳ ಶಿರಚ್ಛೇದನವನ್ನು ಸಹ ಅದೇ ಕತ್ತಿಯಿಂದಲೇ ಮಾಡುವುದಾಗಿ ಬಹಿರಂಗವಾಗಿ ಬೆದರಿಕೆ ವೀಡಿಯೋವನ್ನು ಮಾಡಿ ಭಾರತದ ಹಿಂದೂಗಳಿಗೆ ಮತ್ತು ಭಾರತದ ಕಾನೂನು ವ್ಯವಸ್ಥೆಗೆ ಸವಾಲು ಎಸೆದಿದ್ದಾರೆ.

ನಮ್ಮ ದೇಶದಲ್ಲಿ ಇರುವ ಅಪರಾಧಿಗಳ ವಿಚಾರಣೆಯ ಶೈಲಿ ಮತ್ತು ಸಾದಾರಣ ಜೈಲುವಾಸವೇ ಹತ್ಯೆ ಮಾಡಿದ ಅಪರಾಧಿಗಳ ಈ ಕೃತ್ಯಕ್ಕೆ ಶಕ್ತಿಯಾಗಿದೆ. ಇಂತಹ ಕೃತ್ಯವನ್ನು ಎಸಗಿದ ಇಬ್ಬರೂ ಮುಸ್ಲಿಂ ಜಿಹಾದಿ ಉಗ್ರ ಸಹೋದರರನ್ನು ಕೂಡಲೇ ಎನ್‌ಕೌಂಟರ್ ಮಾಡಬೇಕು ಅಥವಾ ಸಾರ್ವಜನನಿಕವಾಗಿ ಗಲ್ಲಿಗೇರಿಸಬೇಕು. ಇಂತಹ ಅಸಹ್ಯಕರ ಕೃತ್ಯಗಳನ್ನು ಹಿಂದೂ ಸಮಾಜ ಹಾಗೂ ವಿಶ್ವಹಿಂದು ಪರಿಷತ್ ಬಜರಂಗದಳ ಎಂದಿಗೂ ಸಹಿಸುವುದಿಲ್ಲ.

ಬಲಿಯಾದ ಕನ್ಹಯ್ಯಲಾಲ್ ಸಾವಿಗೆ ಸೂಕ್ತ ನ್ಯಾಯ ದೊರಕದ ಹೊರತು ವಿಶ್ವಹಿಂದು ಪರಿಷತ್ ಬಜರಂಗದಳ ಸುಮ್ಮನಿರುವುದಿಲ್ಲ. ಆದ್ದರಿಂದ ತಾವುಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಘನತವತ್ತ ರಾಜ್ಯ ಪಾಲರಿಗೆ ತಹಶೀದಾರ್ ಮೂಲಕ ಮನವಿ ನೀಡಿದ್ದಾರೆ.
ಇದೇ ಸಂಧರ್ಭದಲ್ಲಿ ಉಮೇಶ್. ಮಹಾಂತೇಶ್, ಹಿತೇಶ್, ಸಿದ್ದೇಶ್ ಇತರರು ಇದ್ದರು.

About The Author

Namma Challakere Local News
error: Content is protected !!