ಚಳ್ಳಕೆರೆ : ಆಟೋ ಮೊಬೈಲ್ ತಂತ್ರಜ್ಞರಾಗುವ ಕನಸು ನನಸಾಗಲು ಶೇಕಡ ನೂರರಷ್ಟು ಉದ್ಯೋಗ ಭರವಸೆಯ ಸುವರ್ಣಾವಕಾಶ ಚಳ್ಳಕೆರೆಯಲ್ಲಿ ಇದೆ ಎಂದು ಈ ಅವಕಾಶವನ್ನು ಆಸಕ್ತ ವಿದ್ಯಾರ್ಥಿಗಳು ಬಳಕೆ ಮಾಡಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಮಾಧ್ಯಮದೊಂದಿಗೆ ಹೇಳಿದ್ದಾರೆ.

ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ (ಗರಿಷ್ಟ ವಯೋಮಿತಿ
22ವರ್ಷಇರುವ ಯುವಕರು ಟಯೋಟ, ಕಿರ್ಲೋಸ್ಕರ್ ಮೋಟಾರ್ ಲಿ. ಹಾಗೂ ಜಿ.ಟಿ.ಟಿ.ಸಿ. ಯಲ್ಲಿ ಉದ್ಯೋಗ ಅವಕಾಶ ಪಡೆಯಬಹುದು.
ವೆಹಿಕಲ್ ಅಸೆಂಬ್ಲಿ ಫೀಟ್ಟರ್ (1+2 ವರ್ಷಗಳು, 40 ಅಭ್ಯರ್ಥಿಗಳಿಗೆ ಸೀಮಿತ) ಆಟೋಮೊಬೈಲ್ ವೆಲ್ಡರ್ (1+2 ವರ್ಷಗಳು, 40 ಅಭ್ಯರ್ಥಿಗಳಿಗೆ ಸೀಮಿತ) ಈ ಎರಡು ಕೋರ್ಸ್ಗಳನ್ನು ಪ್ರಾರಂಭಿಸಲಾಗುತ್ತಿದೆ.


ಈ ತರಭೇತಿಗೆ ದಾಖಲಾದ ವಿದ್ಯಾರ್ಥಿಗಳು ಮೊದಲು ಒಂದು ವರ್ಷ ಜಿ.ಟಿ.ಟಿ.ಸಿ. ಚಳ್ಳಕೆರೆ ಇಲ್ಲಿ ತರಬೇತಿ ನಂತರದ ಎರಡು ವರ್ಷ ಬೆಂಗಳೂರಿನ ಟಯೋಟಾ, ಕಿರ್ಲೋಸ್ಕರ್ ಮೋಟಾರ್‌ಲಿ. ಕಂಪನಿಯಲ್ಲಿ ಸೈಫಂಡ್ ಸಹಿತ (ರೂ.12,000 ರಿಂದ 15,000 ಪ್ರತಿ ತಿಂಗಳು) ಆನ್ ಜಾಬ್ ತರಭೇತಿ ನೀಡಲಾಗುವುದು, ತರಬೇತಿಯ ನಂತರ ಟಯೋಟಾ ಸಮೂಹದಲ್ಲಿ ಉದ್ಯೋಗ ಅವಕಾಶ ಕಲ್ಪಿಸಲಾಗುವುದು.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 30, ಅರ್ಜಿ ಪಡೆಯುವ ಹಾಗೂ ಅರ್ಜಿ ಸಲ್ಲಿಸುವ ಸ್ಥಳ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ.) ಬಳ್ಳಾರಿ ರಸ್ತೆಯ ಶ್ರೀ ಶಾರದ ಗಣಪತಿ ಕೋಲ್ಡ್ ಸ್ಟೋರೆಜ್ ಹತ್ತಿರ ಚಳ್ಳಕೆರೆ, ಮೊಬೈಲ್ ನಂ: 7019066755, 08195 299911.

About The Author

Namma Challakere Local News
error: Content is protected !!