ಚಳ್ಳಕೆರೆ : ಗೋಪನಹಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಲಕ್ಷö್ಮಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಘೋಷಣೆ ಮಾಡಿದ್ದಾರೆ.
ತಾಲೂಕಿನ ಗೋಪನಹಳ್ಳಿ ಗ್ರಾಪಂ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಸ್ಥಾನಗಳು ಎಸ್ಟಿ ಮಹಿಳೆಯರಿಗೆ ಮೀಸಲಿದ್ದ ಕಾರಣ ಅಧ್ಯಕ್ಷೆ ಲಕ್ಷö್ಮಮಕ್ಕ ಹಾಗೂ ಉಪಾಧ್ಯಕ್ಷೆ ಲೀಲಾವತಿ ಇಬ್ಬರು ರಾಜೀನಾಮೆ ನೀಡಿದ್ದರು.
ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ತೆರವಾಗಿದ್ದ ಸ್ಥಾನಗಳಿಗೆ ಮಂಗಳವಾರ ಗೋಪನಹಳ್ಳಿ ಗ್ರಾಪಂ ಕಚೇರಿಯಲ್ಲಿ ನಡೆದ ಅಧ್ಯಕ್ಷೆ ಸ್ಥಾನಕ್ಕೆ ಲಕ್ಷö್ಮಮ ಹಾಗೂ ಲೀಲಾವತಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು ಉಪಾಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಕಾರಣ ಚುನಾವಣೆ ನಡೆಯಲಿಲ್ಲ.
ಅಧ್ಯಕ್ಷೆ ಸ್ಥಾನಕ್ಕೆ ಲಕ್ಷಮ್ಮ ರಾಜಿನಾಮೆ ನೀಡಿ ಮತ್ತೆ ಎರಡನೇ ಅವಧಿಗೆ ಸ್ಫರ್ಧೆಗೆ ಇಳಿದಿದ್ದು 13 ಮತಗಳನ್ನು ಮತಪಡೆದು ಜಯಶೀಲರಾದರೆ, ಉಪಾಧ್ಯಕ್ಷೆ ಸ್ಥಾನಕ್ಕೆ ರಾಜಿನಾಮೆ ನೀಡಿ ಅಧ್ಯಕ್ಷೆ ಸ್ಥಾನಕ್ಕೆ ಸ್ಫರ್ಧಿಸಿದ್ದ ಲೀಲಾವತಿ 4 ಮತಗಳನ್ನು ಪಡೆದು ಸೋಲುಂಡಿದ್ದಾರೆ ಖಾಲಿ ಇರುವುದು ಉಪಾಧ್ಯಕ್ಷ ಸ್ಥಾನಕ್ಕೆ ಮತ್ತೆ ಚುನಾವಣೆ ದಿನಾಂಕ ಘೋಷಣೆ ಮಾಡುವ ತನಕ ಖಾಲಿ ಇರಲಿದೆ.