ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರಾದ ಮತ್ತು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ
ಟಿ ರಘುಮೂರ್ತಿ ಹುಟ್ಟುಹಬ್ಬದ ಪ್ರಯುಕ್ತ ನಗರದ ಬನಶ್ರೀ ವೃದ್ಧಾಶ್ರಮದಲ್ಲಿ
ಚಳ್ಳಕೆರೆ ನಗರಸಭಾ ಅಧ್ಯಕ್ಷರಾದ. ಆರ್ ಮಂಜುಳಾ ಪ್ರಸನ್ನ ಕುಮಾರ್ ಮತ್ತು ಕೆಪಿಸಿಸಿ ಕುಶಲಕರ್ಮಿಗಳ ರಾಜ್ಯಾಧ್ಯಕ್ಷರಾದ ಆರ್ ಪ್ರಸನ್ ಕುಮಾರ್ ಮತ್ತು ನೇತಾಜಿ ಸ್ನೇಹ ಬಳಗದ ವತಿಯಿಂದ ವೃದ್ಧಾಶ್ರಮದಲ್ಲಿ ಸಿಹಿ ಊಟದ ವ್ಯವಸ್ಥೆಯನ್ನು ಮಾಡಿ ಒಂದು ವರ್ಷಕ್ಕೆ ಅಗತ್ಯವಿರುವ ದಿನಸಿ ಸಾಮಾನನ್ನು ನೀಡಲಾಯಿತು.
15 ಪ್ಯಾಕೆಟ್ ಸೋನಾಮಸೂರಿ ಅಕ್ಕಿ ಪದಾರ್ಥಗಳನ್ನು ಮತ್ತು ಒಂದು ಟಿನ್ ಎಣ್ಣೆ ಅಡುಗೆ ದಿನಸಿ ಪದಾರ್ಥಗಳನ್ನು
ಶಾಸಕರ ಸಮ್ಮುಖದಲ್ಲಿ ಬನಶ್ರೀ ವೃದ್ಧಾಶ್ರಮದ ಮುಖ್ಯಸ್ಥರಾದ ಮಂಜುಳಾ ನಿವೃತ್ತ ಶಿಕ್ಷಕಿ ಇವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಮಂಜುಳಾ ಪ್ರಸನ್ ಕುಮಾರ್ , ಕೆಪಿಸಿಸಿ ಕುಶಲಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷರಾದ ಆರ್ ಪ್ರಸನ್ ಕುಮಾರ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಚೇತನ್ ಕುಮಾರ್, ನಗರಸಭಾ ಸರ್ಕಾರದ ನಾಮನಿರ್ದೇಶನ ಸದಸ್ಯರಾದ ನೇತಾಜಿ ಪ್ರಸನ್ನ , ನಟರಾಜ್ ಮತ್ತು ನಗರಸಭಾ ಉಪಾಧ್ಯಕ್ಷರಾದ ಕವಿತಾ ಬೋರಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ , ಮತ್ತು ಶಶಿಧರ್ ನಗರಸಭಾ ಸದಸ್ಯರುಗಳು ಹಾಗೂ ಟಿ ರಘುಮೂರ್ತಿ ಅಭಿಮಾನಿ ಬಳಗದವರು ಭಾಗಿಯಾಗಿದ್ದರು

