ತಾಯಿ ಹೆಸರಿನಲ್ಲಿ ಪ್ರತಿಯೊಬ್ಬರು ಒಂದೊಂದು ಗಿಡ ಬೆಳೆಸಿ……

ಚಳ್ಳಕೆರೆ.

ಗಿಡ ಮರಗಳನ್ನ ಬೆಳಸುವುದ ಮೂಲಕ ಪರಿಸರ ಉಳಿಸಿಬೇಕು ಎಂದು ಅರಣ್ಯ ಇಲಾಖೆ ಬಳ್ಳಾರಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ನಾಯಕ ಹೇಳಿದರು….

ಚಳ್ಳಕೆರೆ ವಲಯ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಹಾಗು ಸಾರ್ವಜನಿಕ ಶಿಕ್ಷಣಾ ಇಲಾಖೆ ಹಾಗೂ ಸಂಶೋಧನಾ ಅರಣ್ಯ ಇಲಾಖೆ, ಇವರ ವತಿಯಿಂದ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಗಿಡ ವಿತರಿಸಿ ಗಿಡ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ,ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ತಾಯಿ ಹೆಸರಿನಲ್ಲಿ ಗಿಡವನ್ನ ಹಾಕಿ ಬೆಳೆಸಿ ಈ ಗಿಡ ಬೆಳೆದು ಮರವಾದರೆ ಮುಂದಿನ ದಿನಗಳಲ್ಲಿ ನೆರಳು ಕೊಡುವುದರ ಜೊತೆಗೆ ಪರಿಸರ ಸಮತೋಲನವಾಗಿರಲು ಸಾಧ್ಯವಾಗುತ್ತದೆ ಇದರಿಂದ ಉತ್ತಮವಾದ ಗಾಳಿ, ಹಣ್ಣು ಸಿಗುವುದರ ಜತೆಗೆ ಪರಿಸರವು ಸಹ ಉಳಿಯುತ್ತದೆ ಎಂದರು…..

ಹಿರಿಯೂರು ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಎಸ್ .ಸುರೇಶ ಮಾತನಾಡಿ, ವಿಶ್ವ ಪರಿಸರ ಇದೇ ತಿಂಗಳಲ್ಲಿ ಆಚರಣೆ ಮಾಡಲಾಗುತ್ತದೆ. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಅವಮಾನ ಬದಲಾವಣೆಯು ಜನರ ಜೀವನ ಮತ್ತು ಆರೋಗ್ಯದ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ .ಸುರಕ್ಷತೆ ಕುಡಿಯುವ ನೀರು ಶುದ್ದ ಗಾಳಿ ಪೌಷ್ಟಿಕ ಸಮೃದ್ಧಿ ಆಹಾರದ ಪೂರೈಕೆ ಮತ್ತು ವಾಸಿಸಲು ಸುರಕ್ಷಿತ ಸ್ಥಳ ಎಲ್ಲವೂ ಅಪಾಯದಲ್ಲಿದೆ ಮತ್ತು ಇದು ಜಾಗತಿಕ ಆರೋಗ್ಯದಲ್ಲಿ ದಶಕಗಳ ಪ್ರಗತಿಯನ್ನು ದುರ್ಬಲಗೊಳಿಸಬಹುದು.

ಆದುದರಿಂದ ಪ್ರತಿಯೊಬ್ಬರೂ ಮರಗಿಡವನ್ನ ಬೆಳೆಸಿ ಪರಿಸರವನ್ನ ಉಳಿಸಬೇಕಾಗುತ್ತದೆ. ಹಾಗೂ ಪರಿಸರ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕಾಗುತ್ತದೆ ಎಂದರು….

ಈ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಲಯ ಅರಣ್ಯಾಧಿಕಾರಿ ಎಸ್ ವಿ. ಮಂಜುನಾಥ್ ಸಾಮಾಜಿಕ ಅರಣ್ಯ ಇಲಾಖೆಯ ನಿತೀನ್ ಬಲ್ಲೂರು, ಸಂಶೋಧನಾ ಅರಣ್ಯ ಇಲಾಖೆಯ ಅಧಿಕಾರಿ ಮಸ್ತಾನ್, ಕುಡಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಹೆಚ್. ಸುರೇಶ್, ಉಪವಾಲಯ ಅರಣ್ಯಾಧಿಕಾರಿ ದರ್ಶನ್ ,ಗುರು ಲಿಂಗೇಶ್, ರಾಜೇಶ್ ಇಮಾಮ್ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗಳು ಇದ್ದರು…..

About The Author

Namma Challakere Local News
error: Content is protected !!