ಚಳ್ಳಕೆರೆ :
ಚಳ್ಳಕೆರೆ: ಕಳ್ಳೆ ಮುಳ್ಳಿನಿಂದ ಕೂಡಿದ ರಸ್ತೆ ಸರಿಪಡಿಸಿ
ಚಳ್ಳಕೆರೆ ತಾಲೂಕಿನಿಂದ ನಗರಂಗೆರೆಯಿಂದ ಮುಖ್ಯ ರಸ್ತೆಗೆ
ತಲುಪಬೇಕಾದ, ರಸ್ತೆ ಕಳ್ಳಿ ಮುಳ್ಳುಗಳಿಂದ ಕೂಡಿದ್ದು, ರಸ್ತೆ
ಮದ್ಯದಲ್ಲಿ ವಿದ್ಯುತ್ ಕಂಬಗಳಿರುವುದರಿಂದ ಅಪಘಾತಗಳು
ನಡೆಯುತ್ತಿವೆ. ಇಕ್ಕಟ್ಟಾದ ರಸ್ತೆಯಲ್ಲಿಸಂಚರಿಸುವ ವಾಹನ
ಸವಾರರಿಗೆ, ಮುಳ್ಳು ಬಡಿದು ಗಾಯಗಳಾಗಿರುವ ಘಟನೆಗಳು
ನಡೆದ ಉದಾಹರಣೆಗಳಿವೆ. ಇಂದು 2 ವಾಹನಗಳು ಮುಖಾಮುಖಿ
ಡಿಕ್ಕಿ ಹೊಡೆದು ಗಾಯಗಳಾಗಿರುವ ಘಟನೆ ನಡೆದಿದೆ.
ರಸ್ತೆ ಸರಿಪಡಿಸುವಂತೆ ಅನೇಕ ಸಾರಿ ಮನವಿ ಮಾಡಿದರು
ಪ್ರಯೋಜನವಾಗಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.

