ಚಳ್ಳಕೆರೆ :
ಹೊಳಲ್ಕೆರೆ: ಬಿ ದುರ್ಗ ಕೆರೆಯಲ್ಲಿ ಶಂಕಾಸ್ಪದ ರೀತಿ ವೃದ್ಧೆ
ಶವ ಪತ್ತೆ
ಹೊಳಲ್ಕೆರೆಯ ಬಿ ದುರ್ಗದ ಕೆರೆಯಲ್ಲಿ ಅನುಮಾನಾಸ್ಪದ
ರೀತಿಯಲ್ಲಿ ವೃದ್ಧೆಯ ಶವವೊಂದು ಇಂದು ಬೆಳಗ್ಗೆ 8 ಗಂಟೆಗೆ
ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿರುವ ಶಂಕೆ
ವ್ಯಕ್ತವಾಗಿದೆ. ಮೃತ ವೃದ್ಧೆಯನ್ನು ನಾಗಮ್ಮ (75) ಎಂದು
ಗುರುತಿಸಲಾಗಿದೆ. ಕೆರೆಯಲ್ಲಿ ನಾಗಮ್ಮನ ಶವವನ್ನು ಕಂಡು ಜನರಲ್ಲಿ
ಆತಂಕ ಮನೆ ಮಾಡಿದೆ. ಚಿಕ್ಕಜಾಜೂರು ಪೊಲೀಸರು ಸ್ಥಳಕ್ಕೆ ಭೇಟಿ
ನೀಡಿ ಪರಿಶೀಲಿಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

