ಚಳ್ಳಕೆರೆ : ನ್ಯಾಷನಲ್ ಹೈವ್ ನಿರ್ಮಾಣಕ್ಕೆ ರೈತರಿಂದ ತಕಾರಾರು, ಸೂಕ್ತ ಪರಿಹಾರ ಹಾಗೂ ಸರ್ವೆಮಾಡಿಸಿ ರಸ್ತೆಕಾಮಗಾರಿ ಮಾಡಿ ಎಂದು ಒತ್ತಾಯ
ಹೌದು
ಚಳ್ಳಕೆರೆ ನಗರದ ಹೊರವಲಯದಲ್ಲಿ ಹಾದು ಹೊಗಿರುವ ನ್ಯಾಷನಲ್ ಹೈವೆ ಕಾಮಗಾರಿಗೆ ಇಂದು ರೈತರು ಅಡ್ಡಿ ಪಡಿಸಿ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.
ಇನ್ನೂ ರಸ್ತೆ ಕಾಮಗಾರಿ ಮಾಡಲು ಹೊರಟಿರುವ ಸರಕಾರ ರೈತರ ಜಮೀನು ಪಡೆದ ಬಳಿಕ ಸೂಕ್ತ ಪರಿಹಾರ ನೀಡಿಲ್ಲವೆಂದು ನೊಂದ ರೈತ ಸುರೇಶ್, ಪಾಪಣ್ಣ, ಕಾಮಗಾರಿ ಸ್ಥಳಕ್ಕೆ ದಾವಿಸಿ ಪರಿಹಾರ ಹಾಗೂ ಸೂಕ್ತ ಜಮೀನು ನಿಗಧಿಗೊಳಿಸಿ ಪ್ರಾರಂಭಿಸಿ ಎಂದಿದ್ದಾರೆ. ಇನ್ನೂ ನಿಗಧಿತ ಜಮೀನು ಅಳತೆ ಮಾಡಿಸಿ ಕೊಡಬೇಕಾದವರೂ ಇದುವರೆಗೆ ಅಳತೆ ಮಾಡಿಸದೆ ಕೇವಲ ರಸ್ತೆ ಕಾಮಗಾರಿ ಮಾಡುತ್ತಿರುವುದು ರೈತರ ಆಕ್ರೋಶ ಕ್ಕೆ ಕಾರಣವಾಗಿದೆ.
ರೈತರು ಜಮೀನಗಳಲ್ಲಿ ಸುಮಾರು ವರ್ಷಗಳಿಂದ ಫಲ ನೀಡುವ ಹಲವು ಮರಗಳು ರಸ್ತೆ ಕಾಮಗಾರಿ ವ್ಯಾಪ್ತಿಗೆ ಒಳಪಡುತ್ತಿವೆ. ಆದರೆ ಕಳೆದ ವರ್ಷಗಳಿಂದ ನೆಪ ಹೇಳಿಕೊಂಡು ಕೇವಲ ರಸ್ತೆ ಕಾಮಗಾರಿ ಮಾತ್ರ ಮಾಡುತ್ತಾರೆ ಆದರೆ ಸರ್ವೆ ಮಾಡಿಸಿ ನಿಗಧಿತ ಜಮೀನು ಪಡೆಯದೆ ರಸ್ತೆ ಮಾಡುವುದು ಸರಿಯಲ್ಲ.
ರೈತರಿಗೆ ನೆರವಾಗಬೇಕಾದ ಸರಕಾರ ಮಾರಕವಾದರೆ ಹೇಗೆ ಎಂದು ಸ್ಥಳದಲ್ಲಿದ್ದ ಸುರೇಶ್ ಚಂದ್ರಣ್ಣ ಮನವಿ ಮಾಡಿದ್ದಾರೆ, ಇನ್ನೂ ಕಾಮಗಾರಿ ಸ್ಥಳಕ್ಕೆ ದಾವಿಸಿದ ತಹಶೀಲ್ದಾರ್ ಎನ್ ರಘುಮೂರ್ತಿ ಜಮೀನು ವಿವಾಧ ಇದ್ದರೆ ಕೂಡಲೇ ಪರಿಹಾರ ನೀಡುತ್ತೆನೆ, ನಿಮ್ಮ ಜಮೀನು ಅಳತೆ ಮಾಡಿಸಿ ಉಳಿಕೆ ಜಮೀನು ನಿಮ್ಮ ವಶಕ್ಕೆ ನೀಡಲಾಗುವುದು, ಸರಕಾರದ ಆದೇಶಗಳನ್ನು ತಪ್ಪದೆ ಪಾಲಿಸಬೇಕು, ಕಾಮಗಾರಿಗೆ ಯಾರೂ ಕೂಡ ಅಡ್ಡಿ ಪಡಿಸುವಂತಿಲ್ಲ, ನಿಮ್ಮ ಬೇಡಿಕೆಗಳನ್ನು ಈಡೀರಿಸಿ ಕೊಡಲಾಗುವುದು ಎಂದು ರೈತರನ್ನುಮನ ಹೊಲಿಸಿ ಸಮಸ್ಯೆಯನ್ನು ತಿಳಿಗೊಳಿಸಿದ್ದಾರೆ

ಇನ್ನೂ ರೈತರ ಹಾಗು ನ್ಯಾಷನಲ್ ಹೈವೆ ಅಧಿಕಾರಿಗಳ ರಕ್ಷಣೆಗೆ ಪೊಲೀಸ್ ಸಿಬ್ಬಂದಿ ದಾವಿಸಿ ಸಮಸ್ಯೆ ಬಿಗಾಡಾಯಿಸದಂತೆ ತಿಳಿಗೊಳಿಸಿದರು.

About The Author

Namma Challakere Local News
error: Content is protected !!