ಚಳ್ಳಕೆರೆ : ದಿನ ನಿತ್ಯ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶದಕ್ಕೆ ಬರುವ ಸಾರ್ವಜನಿಕರು ಶಾಲಾ ಮಕ್ಕಳು ಅದಗೆಟ್ಟ ತಗ್ಗು ಗುಂಡಿಗಳ ರಸ್ತೆಗಳಿಂದ ನಿತ್ಯವೂ ಹೈರಾಣಗಿದ್ದಾರೆ.

ತಾಲೂಕಿನ ದುರ್ಗಾವಾರ ರಸ್ತೆ, ದೊಡ್ಡ ಉಳ್ಳಾರ್ತಿ , ಗೌರಸಮುದ್ರ, ಜಾಜೂರು, ಕಾಮ ಸಮುದ್ರ, ಮೊದೂರೂ, ಮೀರಾಸಬಿಹಳ್ಳಿ ಈಗೇ ತಾಲೂಕಿನ ಉದ್ದಕ್ಕೂ ರಸ್ತೆಗಳು ಈಗೇ ತಗ್ಗು ಗುಂಡಿಗಳು ಬಿದ್ದು ಹಾಳಾಗಿವೆ ಆದರೆ ಅಧಿಕಾರಿಗಳ ಮಾತ್ರ ಮೌನ ವಹಿಸಿದ್ದಾರೆ.

ಇನ್ನೂ ತಾಲೂಕು ಆಡಳಿತ ಮಾತ್ರ ಹಳ್ಳಿಯ ಕಡೆ ಗ್ರಾಮದ ಕಡೆ, ಸಮಸ್ಯೆ ಮುಕ್ತ ಗ್ರಾಮ, ಗ್ರಾಮ ವಾಸ್ತವ್ಯ ಎಂಬ ವಿನೂತನ ಕಾರ್ಯಕ್ರಮಗಳ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಪರಿಹಾರ ನೀಡುವರು ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ ಆದರೆ ಇಂತಹ ದುಸ್ಥಿತಿಯಲ್ಲಿರುವ ರಸ್ತೆಗಳ ಗೋಳು ಕೇಳುವಾರ್ಯಾರು,

ಸುಮಾರು ವರ್ಷಗಳಿಂದ ಈ ಭಾಗದ ಜನರು ಅನ್ಯ ಮಾರ್ಗವಿಲ್ಲದೆ ಈದೇ ರಸ್ತೆಯನ್ನು ನಂಬಿ ಕೊಂಡಿದ್ದಾರೆ .

ನಿತ್ಯವೂ ಸಾವಿರಾರು ಜನರು ಈದೇ ರಸ್ತೆಯನ್ನು ಅವಲಂಭಿಸಿದ್ದಾರೆ ಆದರೆ ಇಂತಹ ಅದಗೆಟ್ಟ ರಸ್ತೆಯಿಂದ ಸುಮಾರು ಜನರು ಬಿದ್ದ ಕೆಲವರು ಸಾವಿನಪ್ಪಿದರೆ ಇನ್ನೂ ಕೆಲವರು ಅಪಘಾತದಲ್ಲಿ ಸಿಲುಕಿ ಇಂದಿಗೂ ಮನೆಯಲ್ಲಿ ಜೀವಂತ ಶವವಾಗಿ ಇದ್ದಾರೆ.

ಇದರಿಂದ ಮೌನವಹಿಸಿದ ಅಧಿಕಾರಿಗಳ ಕಾರ್ಯ ವೈಖರಿಗೆ ಈಡೀ ಗ್ರಾಮೀಣ ಪ್ರದೇಶದ ಜನರು ಶಾಪ ಹಾಕುತ್ತಿದ್ದಾರೆ

ಇದರಿಂದ ತಾಲೂಕು ಆಡಳಿತದ‌ ಮುಂದೆ ಪ್ರತಿಭಟನೆ, ರಸ್ತೆ ತಡೆ, ಮಾಡುವುದಕ್ಕೂ ಮುನ್ನ ತಾಲೂಕು ಆಡಳಿತ ಎಚ್ಚರ ವಹಿಸಿ ಸೂಕ್ತ ಇಲಾಖೆಗೆ ನಿರ್ದೇಶನ ನೀಡಿ ರಸ್ತೆ ತಗ್ಗು ಗುಂಡಿಗಳನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!