ಚನ್ನಗಾನಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ
ಒಕ್ಕಲಿಗ ಸಮುದಾಯದಿಂದ ಮೊದಲ ಬಾರಿಗೆ ಜಯಂತಿ ಆಚರಣೆ


ಪೂರ್ಣಕುಂಭ ಹೊತ್ತ ಮಹಿಳಾ ಮಣಿಗಳು
ಕಾರ್ಯಕ್ರಮದ ಮುನ್ನ ಶಾಲಾ ಮಕ್ಕಳಿಗೆ ನೋಟ್ ಬುಕ್ ಪೆನ್ನು ವಿತರಿಸಿದ ಯುವಕರು.
ಸಸಿ ನೆಡುವು ಮೂಲಕ ಕಾರ್ಯಕ್ರಮಕ್ಕೆ ಚಾಲನೆ

ನಾಡಫ್ರಭು ಕೆಂಪೆಗೌಡ ಜಯಂತಿ ಪ್ರಯುಕ್ತ ಚನ್ನಗಾನಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮದ ಪೂರ್ವವೇ ಗ್ರಾಮದ ರಾಜ ಬೀದಿಗಳಲ್ಲಿ ಪೂರ್ಣಕುಂಭ ಹೊತ್ತ ಹೈದಿಯರ ಜೊತೆ ಕೆಂಪೆ ಗೌಡ ಭಾವಚಿತ್ರವುಳ್ಳ ಅದ್ದೂರಿ ಮೆರವಣೆಗೆಗೆ ಗ್ರಾಮದ ಸರ್ವರೂ ಸಾಕ್ಷಿಕರಿಸಿದರು
ಈ ಕಾರ್ಯಕ್ರಮದ ಪೂರ್ವ, ಶಾಲಾ ಆವರಣದಲ್ಲಿ ಕೆಂಪೆಗೌಡ ಜಯಂತಿ ಅಂಗವಾಗಿ ಸಸಿ ನೆಟ್ಟು ಚಾಲನೆ ನಿಡಿದರು, ನಂತರ ಮಕ್ಕಳಿಗೆ ಅನ್ನಸಂತರ್ಪಣೆ, ಹಾಗೂ ನೋಟ್ ಬುಕ್ ಪೆನ್ನು, ಹಾಗೂ ಪ್ರತಿಭಾವನ್ವಿತ ಮಕ್ಕಳಿಗೆ ಸನ್ಮಾನ ಮಾಡಿದರು.

ನಂತರ ಮಾತನಾಡಿದ ಡಾಕ್ಟರ್.ಸಂಜೀವರೆಡ್ಡಿ, ಉದ್ಯಾನ ನಗರಿ, ಸಿಲಿಕಾನ್ ಸಿಟಿ ಎಂದೆಲ್ಲಾ ಹೆಸರಾಗಿರುವ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಲು ಕೆಂಪೇಗೌಡರ ದೂರದೃಷ್ಟಿ ಕಾರಣ ಎಂದು ಹೇಳಿದರು.
ಅವರು ತಾಲೂಕಿನ ಚನ್ನಗಾನಹಳ್ಳಿ ಗ್ರಾಮದ ರಂಗಮಂದಿದರದಲ್ಲಿ ಆಯೋಜಿಸಲಾದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವದಲ್ಲಿ ಪ್ರಗತಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಹೊಂದಿದೆ. ಇಂದಿನ ಬೆಂಗಳೂರು ನಿರ್ಮಾಣಕ್ಕೆ ಹಲವು ಮಹನೀಯರ ಕೊಡುಗೆಯಿದೆ. ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿದ ಕೆಂಪೇಗೌಡರು ನಾಡಫ್ರಭು ಸ್ಥಾನಕ್ಕೆ ಏರಿದರು. ಆದರ್ಶಮಯ ರಾಜ್ಯ ನಿರ್ಮಾಣಕ್ಕೆ ಕೊಡಗೆ ನೀಡಿದ ಮಹನೀಯರನ್ನು ನಾವೆಲ್ಲರೂ ಸ್ಮರಿಸಬೇಕು. ಅವರ ತತ್ವಾದರ್ಶಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಗ್ರಾಪA.ಮಾಜಿ ಸದಸ್ಯ ನಾರಾಯಣರೆಡ್ಡಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ದಾರ್ಶನಿಕರು, ಮಹನೀಯರು, ರಾಷ್ಟ್ರ ನಾಯಕರು ಯಾವುದೇ ಜಾತಿಗೆ ಸೀಮಿತರಲ್ಲ. ಜಾಗತಿಕ ಮಟ್ಟದಲ್ಲಿ ಕರ್ನಾಟಕ ಮನೆ ಮಾತಾಗಲು ಬೆಂಗಳೂರು ಕಾರಣ. ದೇಶದಲ್ಲಿ ಕರ್ನಾಟಕ ಸುಭೀಕ್ಷ ರಾಜ್ಯ ಎಂದು ಹೆಸರು ಪಡೆದಿದೆ. 1537 ರಲ್ಲಿ ಕೆಂಪೇಗೌಡ ಅವರು ಬೆಂಗಳೂರು ನಗರ ನಿರ್ಮಾಣಕ್ಕೆ ಅಡಿಪಾಯ ಹಾಕಿದರು ಎಂದರು.
ಮುಖAಡ ಮಲ್ಲೆಶ್ ಮಾತನಾಡಿ, ಕೃಷಿ ಸೇರಿದಂತೆ ಎಲ್ಲಾ ಉಪಕಸುಬುಗಳ ಜನರಿಗೆ ಅವಕಾಶ ಕಲ್ಪಿಸಿದರು. ಮೂಲತಃ ಯಲಹಂಕ ನಾಡ ಪ್ರಭುಗಳು ಎಂದು ಹೆಸರು ಕೆಂಪೇಗೌಡರ ಮನೆತನದವರಿಗೆ ಇತ್ತು. ತಮಿಳುನಾಡಿನ ಪುತ್ತೂರಿನ ಮೂಲದಿಂದ ಕೆಂಪೇಗೌಡರ ವಂಶಜರು ಪಾಲಾರ್ ನದಿ ದಾಟಿ ಬೆಂಗಳೂರಿನ ಕಡೆ ಬಂದರು. ಕೆಂಪೇಗೌಡರು ದೂರದೃಷ್ಟಿ ಜೊತೆ ಪ್ರಗತಿಪರ ಚಿಂತನೆ ಹೊಂದಿದ್ದರು. ಮೂಢನಂಬಿಕೆ ಕಂದಾಚಾರಗಳನ್ನು ತೊಡೆದು ಹಾಕಿದರು ಎಂದರು.
ಗ್ರಾಮದ ಹಿರಿಯ ತಿಮ್ಮಾರೆಡ್ಡಿ ಮಾತನಾಡಿ, ಬೆಂಗಳೂರು ಕಾಯಕ ನೀಡುವ ಹಾಗೂ ಕಾಯಕ್ಕೆ ಪ್ರತಿಫಲ ನೀಡುವ ನಗರವಾಗಿ ಪರಿವರ್ತನೆಗೊಂಡಿದೆ. ಉತ್ತಮ ಹವಾಮಾನ ಹಾಗೂ ಆಯಕ್ಕಟಿನ ಜಾಗದಲ್ಲಿದೆ. ಕೆಂಪೇಗೌಡರು ವಿಶ್ವ ಪ್ರಸಿದ್ದ ಕೆರೆಗಳನ್ನು ನಿರ್ಮಿಸಿ ನಗರದ ನೀರಿನ ಬವಣೆ ನೀಗಿಸಿದರು ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ.ಉಪಾಧ್ಯಕ್ಷ ಸೇವ್ಯಾನಾಯ್ಕ್, ಸದಸ್ಯೆ ಮಂಜುಳಾ ತಿಪ್ಪೇಶ್, ಅಶ್ವಿನಿ ರುದ್ರಮುನಿ, ಮಾಜಿ ತಾಪಂ.ಸದಸ್ಯೆ ತಿಪ್ಪಕ್ಕ ಮಲ್ಲೇಶ್, ಗಂಗಾಧರ್, ವೆಂಕಟೇಶ್ ರೆಡ್ಡಿ, ವೀರಣ್ಣ, ವೈ ಎನ್.ಎಸ್.ಕೋಟೆ ವೆಂಕಟೇಶ್, ಒಕ್ಕಲಿಗರ ಯುವಕ ಸಂಘದ ಪದಾಧಿಕಾರಿಗಳು, ಯುವ ಮುಖಂಡ ವಸಂತ, ಕೇಶವರೆಡ್ಡಿ, ಹೆಚ್.ವಿ.ಪ್ರಕಾಶ್‌ರೆಡ್ಡಿ, ಚೆನ್ನಕೇಶವ, ವೆಂಕಟೇಶ್, ಘಟಪರ್ತಿಬಸವರಾಜ್, ರಾಜಣ್ಣ, ಕು.ಮಲ್ಲೇಶ್, ಲಕ್ಷ್ಮಣ, ತಿಪ್ಪೇಸ್ವಾಮಿ, ಶೇಷಣ್ಣ, ಬಸಪ್ಪ, ಸುಲ್ತಾನ್‌ಸಾಬ್, ಅನಂತ್, ಚೆನ್ನಪ್ಪ, ನಾಗರಾಜ್, ರಾಮಾಂಜನೇಯ, ಚಿದಾನಂದ, ರವಿ, ಡ್ರೆöÊ.ಚನ್ನಪ್ಪ, ಇತರರು ಗ್ರಾಮದ ಮುಖಂಡರು ಮಹಿಳೆಯರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!