“ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು” -ಮಕ್ಕಳಿಗೆ ಯತೀಶ್ ಎಂ ಸಿದ್ದಾಪುರ ಕರೆ.

ಚಳ್ಳಕೆರೆ-ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಹಾಗೂ ಲೇಖಕ ಯತೀಶ್ ಎಂ ಸಿದ್ದಾಪುರ ಮಕ್ಕಳಿಗೆ ಕರೆ ನೀಡಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ”ದಲ್ಲಿ ಪಾಲ್ಗೊಂಡು ಅವರು “ನನ್ನ ಏಳ್ಗೆಗೆ ನಾನೇ ಶಿಲ್ಪಿ” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದ ಪ್ರಯುಕ್ತ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಿಸುವ ಆಟಗಳನ್ನು ಸಂತೋಷಕುಮಾರ ಅಗಸ್ತ್ಯ ಮತ್ತು ಋತಿಕ್ ಆಡಿಸಿದರು.ಈ ಶಿಬಿರದ ದಿವ್ಯ ಸಾನಿಧ್ಯವನ್ನು ಆಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ಭೂಮಿಕ, ಗುರುಪ್ರಸಾದ್, ಬಿ.ಎಸ್ ಶಾಶ್ವತ್, ಅದಿಸ್,ಹರ್ಷಿತಾ, ಪ್ರತೀಕ್ಷಾ, ಯುಕ್ತ,ಮನಸಿರಿ, ನಿಖಿಲೇಶ್ ಯಾದವ್, ಧ್ರುವ ನಾರಾಯಣ,ವಿವಿಕ್ತ, ವೈಷ್ಣವಿ, ಪ್ರಣಾಮ್ಯ, ಕೋಮಲಸಿರಿ, ಯಶಸ್ವಿ,ದವನ್,ಸಹಸ್ರ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!