ಚಳ್ಳಕೆರೆ :

ರಾಜ್ಯದಲ್ಲಿ ಈಗಾಗಲೇ ಒಳಮೀಸಲಾತಿಗೆ ಮೀಸಲಾತಿ ಕಲ್ಪಿಸಲು ನಡೆಸುತ್ತಿರುವ ಜಾತಿಗಣತಿ ಪಾರದರ್ಶಕತೆಯಿಂದ ನಿಗಧಿತ ಅವಧಿಯಲ್ಲಿ ಗಣತಿದಾರರು ಮುಗಿಸಿ ವರದಿ ನೀಡಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು‌.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಮಾಜಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆವತಿಯಿಂದ ಜಾತಿ ಸಮೀಕ್ಷೆ ದಲಿತ ಮುಖಂಡರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಾತಿ ಸಮೀಕ್ಷೆಗಾರರು ನಗರ ಸೇರಿದಂತೆ ತಾಲೂಕಿನಾದ್ಯಂತ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಸಂಬಂಧ ದತಾಂಶ ಸಂಗ್ರಹಣೆಗಾಗಿ ಮನೆ ಮನೆ ಸಮೀಕ್ಷೆ ನಡೆಸಲು ಸಮೀಕ್ಷೆಯಲ್ಲಿ ಭಾಗವಹಿಸುವ ಗಣತಿದಾರರಿಗೆ ಸಮರ್ಪಕ ಮಾಹಿತಿಯನ್ನು ಒದಗಿಸಿ ಶೇ.100ರಷ್ಟು ಪ್ರಗತಿ ಸಾಧಿಸಲು ದಲಿತ ಮುಖಂಡರ ಸಹಕಾರ ಅಗತ್ಯವಾಗಿದೆ ಎಂದರು.

ಸಮೀಕ್ಷೆದಾರರು ಯಾವುದದಾರು ಮನೆಗಳನ್ನು ಸಮೀಕ್ಷೆಯಲ್ಲಿ ಕೈಬಿಟ್ಟಿದ್ದರೆ ಅಂತಹ ಕುಂಟುಗಳ ಅಗತ್ಯ ಮಾಹಿತಿ ನೀಡಿ ಶೇ.100 ರಷ್ಟು ಜಾತಿ ಗಣತಿಗೆ ಸಹಕರಿಸುವಂತೆ ತಿಳಿಸಿದರು.

ಮನೆ ಮನೆ ಸಮೀಕ್ಷೆ ಮೇ29 ಕ್ಕೆ ಕೊನೆ ದಿನಾಂಕವಾಗಿದ್ದು 30 ರಿಂದ ಜೂ.1, ಮೂರು ದಿನಗಳ ಕಾಲ ಆಯಾ ಮತಗಟ್ಟೆ ಕೇಂದ್ರಗಳಲ್ಲಿ ಜಾತಿ ಜಮೀಕ್ಷೆ ವರದಿ ನೀಡಲು ಅವಕಾಶವಿದೆ ಎಂದರು.

ಸಮಾಜ ಕಲ್ಯಾಷಾಧಿಕಾರಿ ದೇವ್ಲನಾಯಕ ಮಾನಾಡಿ ಈಗಾಗಲೆ ಶೇ 100 ಜಾತಿ ಸಮೀಕ್ಷೆ ಮುಗಿದಿರುವ ಬಗ್ಗೆ ದೃಡೀಕರಣ ನೀಡಿವಂತೆ ಸಮೀಕ್ಷೆ ಮೇಲ್ವೀಚಾರಕರಿಗೆ ಸೂಚನೆ ನೀಡಿದರು

ಈ ಸಂದರ್ಭದಲ್ಲಿ ಬಿಇಒ ಸುರೇಶ್, ಅಕ್ಷರ ದಾಸೋಹ ಅಧಿಕಾರಿ ಮಂಜುನಾಥಸ್ವಾಮಿ, ದಲಿತ ಮುಖಂಡರಾದ ಟಿ. ವಿಜಯಕುಮಾರ್ , ನಾಮ ನಿರ್ದೇಶನ ಸದಸ್ಯ ವೀರಭದ್ರಪ್ಪ,. ಹೊನ್ನೂರಸ್ವಾಮಿ, ನಾಗರಾಜ್, ತಿಪ್ಪೇಸ್ವಾಮಿ, ವೆಂಕಟೇಶ್, ಕಾಂತರಾಜ್, ಇತರರಿದ್ದರು.

About The Author

Namma Challakere Local News
error: Content is protected !!