“ಸಸ್ಯಾಹಾರದ ಜನಜಾಗೃತಿ ಜಾಥಾದ ಆಯೋಜನೆ ಶ್ಲಾಘನೀಯ”-
ಮಾತಾಜೀ ತ್ಯಾಗಮಯೀ ಮೆಚ್ಚುಗೆ.

ಚಳ್ಳಕೆರೆ-ಸಸ್ಯಾಹಾರದ ಜನಜಾಗೃತಿ ಜಾಥಾದ ಆಯೋಜನೆ ಶ್ಲಾಘನೀಯವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಸಂತಸ ವ್ಯಕ್ತಪಡಿಸಿದರು.

ವಿಶ್ವಾಮಿತ್ರ ಲೈಟ್ ಫೌಂಡೇಶನ್ ಅವರ ಸಹಯೋಗದಲ್ಲಿ ನಗರದ ಹಳೇನಗರದ ಪತ್ರೀಜಿ ಧ್ಯಾನಾಮೃತ ಕೇಂದ್ರ ಹಾಗೂ ತ್ಯಾಗರಾಜನಗರದ ಶ್ರೀವೀರಭದ್ರೇಶ್ವರ ಪಿರಮಿಡ್ ಕೇಂದ್ರದ ವತಿಯಿಂದ ಆಯೋಜಿಸಿದ್ದ “ಬೃಹತ್ ಸಸ್ಯಾಹಾರದ ಜನಜಾಗೃತಿ ಜಾಥಾ”ದ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನಾವು ತೆಗೆದುಕೊಳ್ಳುವ ಆಹಾರ ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರುತ್ತದೆ.ಸಾತ್ತ್ವಿಕ ಆಹಾರದ ಸೇವನೆಯಿಂದ ಮನಸ್ಸಿನ ಶುದ್ಧಿಯಾಗುತ್ತದೆ. ಆದ್ದರಿಂದ ಆಧ್ಯಾತ್ಮಿಕ ಸಾಧಕರಿಗೆ ಸಸ್ಯಾಹಾರವೇ ಸರ್ವಶ್ರೇಷ್ಠವಾದದ್ದು ಎಂದು ಸಸ್ಯಾಹಾರ ಸೇವನೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

ಈ ಜನಜಾಗೃತಿ ಜಾಥಾವು ಹಳೇನಗರದ ಪತ್ರೀಜಿ ಧ್ಯಾನಾಮೃತ ಕೇಂದ್ರದಿಂದ ಪ್ರಾರಂಭವಾಗಿ ನೆಹರುವೃತ್ತ,ರಹೀಂನಗರ, ಶಾಂತಿನಗರದ ಮೂಲಕ ತ್ಯಾಗರಾಜನಗರದ ಶ್ರೀವೀರಭದ್ರೇಶ್ವರ ಪಿರಮಿಡ್ ಧ್ಯಾನ ಕೇಂದ್ರವನ್ನು ತಲುಪಿತು.ಈ ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯರಾದ ಶ್ರೀಮತಿ ಸಾವಿತ್ರಮ್ಮ, ಧ್ಯಾನಬಂಧುಗಳಾದ ನಾಗೇಂದ್ರ, ಸುಧಾಕರ್, ಹೂವಿನ ಲಕ್ಷ್ಮೀದೇವಮ್ಮ, ಸೌಮ್ಯ,ಮಹಾದೇವಿ, ಗೀತಾ ಪ್ರಕಾಶ್,ಯತೀಶ್ ಎಂ ಸಿದ್ದಾಪುರ, ಸಿದ್ದೇಶ್, ಶಿವಣ್ಣ,ಶುಭ ಸೋಮಶೇಖರ್, ಮೈಯಂಕ್, ಶಿವಕುಮಾರ್,ಸುರೇಶ್, ವಿಜಯಕುಮಾರ್, ಮಂಜುಳ,ಲಕ್ಷ್ಮೀ ಸೇರಿದಂತೆ ಧ್ಯಾನಬಂಧುಗಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!