ಚಳ್ಳಕೆರೆ :
ಹೊಸದುರ್ಗ: ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತರು
ಕಳೆದ ಬಾರಿ ಮುಂಗಾರು ತಡವಾಗಿದ್ದರಿಂದ ತಾಲೂಕಿನಾದ್ಯಂತ
ಬೆಳಕಿಯಷ್ಟು ರೈತರು ಮಾತ್ರ ಹೆಸರು ಬಿತ್ತನೆ ಮಾಡಿದ್ದರು.
ಈ
ಬಾರಿ ಸಮಯಕ್ಕೆ ಸರಿಯಾಗಿ ಹದ ಮಳೆಯಾಗಿದ್ದು, ಹೆಸರು ಬಿತ್ತನೆ
ಚೆನ್ನಾಗಿ ಆಗಿದೆ. ಹದ ಮಳೆಯಿಂದಾಗಿ ಈಗಾಗಲೇ ಬಿತ್ತನೆಯಾದ
ಹೆಸರು ಹುಲಸಾಗಿ ಬೆಳೆಯುತ್ತಿದ್ದು, ರೈತರು ಉತ್ತಮ ಇಳುವರಿಯ
ನಿರೀಕ್ಷೆಯಲ್ಲಿದ್ದಾರೆಂದು ರೈತ ಮುಖಂಡ ನಾಗರಾಜ್ ಹೇಳಿದ್ದಾರೆ.
ಅವರು ಹೊಸದುರ್ಗದಲ್ಲಿಂದು ಮಾತಾಡಿ, ಮತ್ತೊಡು ಹಾಗೂ
ಶ್ರೀರಾಂಪುರ ಹೋಬಳಿಗಳಲ್ಲಿ ಹೆಚ್ಚು ಬಿತ್ತನೆಯಾಗಿದೆ ಎಂದಿದ್ದಾರೆ.

