ಚಳ್ಳಕೆರೆ :
ಮೊಳಕಾಲ್ಕೂರು: ಜಿಟಿ ಜಿಟಿ ಮಳೆ; ಮೋಡ ಮುಸುಕಿದ
ವಾತಾವರಣ
ಮೊಳಕಾಲೂರು ತಾಲೂಕಿನ ಬಹುತೇಕ ಕಡೆ ಬುಧವಾರ ದಿನವಿಡೀ
ಮೋಡ ಮುಸುಕಿದ ವಾತಾವರಣವಿದ್ದು, ಆಗಾಗ ಸೋನೆ
ಮಳೆಯಾಗಿದೆ.
ಮೊಳಕಾಲ್ಕೂರು ಪಟ್ಟಣದಲ್ಲಿ ಬೆಳಿಗ್ಗೆಯಿಂದಲೂ
ಜಿಟಿ ಜಿಟಿ ಮಳೆ ಸುರಿಯಿತು. ವಾರದ ಸಂತೆ ಇದ್ದಿದ್ದರಿಂದ
ವ್ಯಾಪಾರಿಗಳು ತರಕಾರಿ ರಕ್ಷಸಿಕೊಳ್ಳಲು ಪ್ರಯಾಸ ಪಟ್ಟರು.
ಗ್ರಾಹಕರು ತೊಂದರೆ ಅನುಭವಿಸುವ ವಾರದ ಸಂತೆ ನಡೆಯುವ
ಸ್ಥಳ ವರ್ಷದ ಹಿಂದೆ ಕೃಷಿ ಕಚೇರಿ ಸಮೀಪಕ್ಕೆ ಸ್ಥಳಾಂತರ
ಮಾಡಲಾಗಿತ್ತು. ಆದರೆ ನೆರಳು ಶೆಡ್ ವವ್ಯಸ್ಥೆ ಮಾಡಿರಲಿಲ್ಲ ಎಂದು
ವ್ಯಾಪಾರಿಗಳು ಅಳಲು ತೋಡಿಕೊಂಡರು.

