ಚಳ್ಳಕೆರೆ :
ಕರ್ನಾಟಕ ಪರಿಶಿಷ್ಟ ಜಾತಿ / ಮೂಲ ಜಾತಿ ಸಮಗ್ರ ಸಮೀಕ್ಷೆಯಲ್ಲಿ ಮೂಲ ಪಾತಿ ತಪ್ಪಾಗಿ
ನಮೂದು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಹಾಗೂ ಮೂಲ ಜಾತಿ ಕಲಂ ಸರಿ
ಪಡಿಸುವ ಕುರಿತು ಸಾರ್ವಜನಿಕರು ಮನಸಿ ಸಲ್ಲಿಸಿದ್ದಾರೆ.
ಅವರು ನಗರದ ತಾಲೂಕು ಕಛೇರಿಯಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿ, ಮಾತನಾಡಿದರು.
ಮತ್ತಮುದ್ರ ಗ್ರಾಮದಲ್ಲಿ
ಸುಮಾರು ಬೋವಿ ಜನಾಂಗದ 150 ಕ್ಕೂ ಹೆಚ್ಚು ಮನೆಗಳಿದ್ದು, ಜಾತಿ ಸಮೀಕ್ಷೆ ಮಾಡುವ ವೇಳೆಯಲ್ಲಿ
ಮತ್ತಮುದ್ರ ಗ್ರಾಮದ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕರಾದ ಸಿದ್ದೇಶ್,ಟಿ, ರವರು ಮೂಲ ಜಾತಿ ಕಾಲಂನಲ್ಲಿ
ಅದಿ ಕರ್ನಾಟಕ’ ಎಂದು, ಉಪ ಜಾತಿ ಕಾಲಂನಲ್ಲಿ ಬೋವಿ ಎಂದು ದಾಖಲು ಮಾಡಿಕೊಂಡಿದ್ದು, ಇಲ್ಲಿರುವ
ಜನರಿಗೆ ಯಾವುದೇ ಸರಿಯಾದ ಮಾಹಿತಿಯನ್ನು ನೀಡದೇ ಜಾತಿ ಗಣತಿಯನ್ನು ಮಾಡಿಕೊಂಡಿರುತ್ತಾರೆ.
ನಾವು
ಆಗಿರುವ ತಪ್ಪನ್ನು ಶಿಕ್ಷಕರ ಬಳಿ ಕೇಳಿದಾಗ ನಮಗೆ ತರಬೇತಿಯನ್ನು ನೀಡಿರುವುದೇ ಹೀಗೆ, ಆದಿ ಕರ್ನಾಟಕ
ಜಾತಿಯಲ್ಲಿ 101 ಉಪ ಜಾತಿಗಳು ಬರುತ್ತವೆ. ಅದರಲ್ಲಿ ನಿಮ್ಮ ಬೋವಿ ಜಾತಿಯೂ ಒಂದು, ಎಂದು ತಪ್ಪಾಗಿ
ಮಾಹಿತಿ ನೀಡಿರುತ್ತಾರೆ.
ನಮ್ಮ ಬೋವಿ ಜನಾಂಗದವರು ಎಲ್ಲಿಯೂ ಸಹ ಜಾತಿ ಪ್ರಮಾಣ ಪತ್ರದಲ್ಲಾಗಲೀ,
ಹಾಗೂ ಆದಿ ಕರ್ನಾಟಕ ಜಾತಿಯಲ್ಲಿ ಸೇರ್ಪಡೆಯಾಗಿದ್ದೇವೆಂದು ಹೇಳಿಕೊಂಡಿಲ್ಲ. ಆದರೆಶಿಕ್ಷಕರು ನೊಂದಣಿ
ಮಾಡುವ ಸಂದರ್ಭದಲ್ಲಿ ತಪ್ಪಾಗಿ ನೊಂದಣಿ ಮಾಡಿರುತ್ತಾರೆ. ಇದು ಒತ್ತಾಯ ಪೂರ್ವಕವಾಗಿ ದೋವಿ
ಸಮಾಜವನ್ನು ಕಡೆಗಣಿಸಬೇಕೆಂದು ಮೂಲ ಜಾತಿ ಕಾಲಂನಲ್ಲಿ ಬೋವಿ ಎಂದು ನಮೂದಿಸದೆ ಉಪ ಜಾತಿ
ಕಾಲಂನಲ್ಲಿ ನಮೂದಿಸುತ್ತಿದ್ದಾರೆ. ಇದರಿಂದ ನಮ್ಮ ಜನಾಂಗಕ್ಕೆ ವಂಚನೆ ಆಗುತ್ತಿದೆ. ಕೂಡಲೇ ಅಧಿಕಾರಿಗಳು
ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ ತಪ್ಪು ಮಾಡಿರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು, ಹಾಗೂ
ತಪ್ಪನ್ನು ಸರಿಪಡಿಸಬೇಕು ಇಲ್ಲವಾದಲ್ಲಿ ರಾಜ್ಯಾಂದ್ಯಂತ ಹೋರಾಟ ಮಾಡುವುದಾಗಿ ತಿಳಿಸುತ್ತಿದ್ದೇವೆ.
ಇದೇ ಸಂಧರ್ಭದಲ್ಲಿ
ಭೋವಿ ಜನಾಂಗದ ಮುಖಂಡರುಗಳಾದ ತಾಲೂಕು ಅಧ್ಯಕ್ಷರಾದ ಆಂಜನೇಯ, ಮತ್ಸಮುದ್ರ ಭೋವಿ ಜನಾಂಗದ ಮುಖಂಡರುಗಳಾದ ಪುಟ್ಟಯ್ಯ ಎಂ, ಟಿ. ಆಂಜನೇಯ, ಎಚ್ ಚಲ್ಮೇಶ್.ಎ. ರಾಘವೇಂದ್ರ, ಹಾಲೇಶ್ ವೇಂಕಟೇಶ್ ನಂಜುಂಡಿ, ಗೀರೀಶ್ ಹರೀಶ್ ಎಂ ಪಿ. ತಿಪ್ಪೇಸ್ವಾಮಿ ಚಿದಾನಂದ ಕೆ.ವಿ ಹಾಗೂ ಚಲ್ಮೇಶ್ ಎಂ ರವರು ಸಮಾಜಕ್ಕೆ ಆಗಿರುವ ಅನ್ಯಾಯ ಕುರಿತು ಮಾತನಾಡಿದರು

