ಪಟ್ಟಣದ ಗೋಪಾಲಶ್ವೇರ ದೇವಸ್ಥಾನ ಹಿಂಬಾಗ ರಸ್ತೆ ದುರಸ್ಥಿ ಸರಿಪಡಿಸುವಂತೆ ರಾಷ್ಟ್ರೀಯ ಕಿಸಾನ್‌ ಸಂಘದ ಅಧ್ಯಕ್ಷ ಬಿ.ಟಿ ಪ್ರಕಾಶ್ ಜಾಗನೂರಹಟ್ಟಿ ಆಗ್ರಹ

ನಾಯಕನಹಟ್ಟಿ :
ಪಟ್ಟಣದ ಜಾಗನೂರಹಟ್ಟಿ, ಮಾದಯ್ಯನಹಟ್ಟಿ ಮುಖ್ಯ ರಸ್ತೆ ಗೋಪಾಲಶ್ವೇರ ದೇವಸ್ಥಾನ ಹಿಂಬಾಗ ರಸ್ತೆ ತಂಗು ಗುಂಡಿಗಳಿಂದ ಕೂಡಿದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡಲೇ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದಾರೆ, ಬುಧವಾರ ಪಟ್ಟಣದ ಪಾದಗಟ್ಟೆ ಹತ್ತಿರದ ಗೋಪಾಲಶ್ವೇರ ದೇವಸ್ಥಾನ ಹಿಂಬಾಗದಲ್ಲಿ ಇರುವ ತಂಗು ಗುಂಡಿಗಳನ್ನು ವಿಕ್ಷೀಸಿ ಅವರು ಮಾತಾಡಿದ ಅವರು ಜಾಗನೂರಹಟ್ಟಿ, ಮಾದಯ್ಯನಹಟ್ಟಿ ಮಾರ್ಗವಾಗಿ ಹಿರೇಮಲ್ಲನಹೊಳೆವರಿಗೆ ಪ್ರತಿದಿನ ಸಾವಿರಾರು ಕೂಲಿ ಕಾರ್ಮಿಕರು, ವಿಧ್ಯಾರ್ಥಿಗಳು, ರೈತರು, ಈ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದು, ರಸ್ತೆ ತಂಗು ಗುಂಡಿಗಳಿಂದ ಕೂಡಿರುವುದರಿಂದ ಮೂರು ನಾಲ್ಕು ಬೈಕ್‌ ಸವಾರಿರು ಈ ಗುಂಡಿಯಲ್ಲಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ, ಕೆಲದ 3-4 ದಿನಗಳಿಂದ ವರ್ಣನ ಆರ್ಭಟ ಜೋರಾಗಿದ್ದು ರಸ್ತೆಯಲ್ಲಿ ಜನರು ಸಂಚಾರು ಮಾಡುವುದೆ ಕಷ್ಟಕರವಅಗಿದ್ದು, ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.
ಇದೇ ಸಂಧರ್ಭದಲ್ಲಿ ಚನ್ನಬಸಯ್ಯನಹಟ್ಟಿ ಬಿ ಓ ಬೋಸಯ್ಯ, ಗುಂತಕೋಲಮ್ಮನಹಳ್ಳಿ ಬೂಟ್‌ ತಿಪ್ಪೆಸ್ವಾಮಿ, ಹೊಸಜೋಗಿಹಟ್ಟಿ ಚನ್ನಪ್ಪ ಸೇರಿದಂತೆ ಮುಂತಾದವರು ಇದ್ದರು.

About The Author

Namma Challakere Local News
error: Content is protected !!