ಚಳ್ಳಕೆರೆ :
ಚಿತ್ರದುರ್ಗ: ಗೌರವಧನಕ್ಕಾಗಿ ಅಂಗನವಾಡಿ
ಕಾರ್ಯಕರ್ತೆಯರಿಂದ ಪ್ರತಿಭಟನೆ
ಅಂಗನವಾಡಿ ಕಾರ್ಯಕರ್ತೆಯರು ಎಐಟಿಯುಸಿ ನೇತೃತ್ವದಲ್ಲಿಂದು
ಡಿಸಿಹಾಗೂ ಜಿ ಪಂ ಕಚೇರಿ ಬಳಿ ವಿವಿಧ ಬೇಡಿಕೆಗಳನ್ನು
ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಸರ್ಕಾರ
ಕೊಟ್ಟ ಮಾತಿನಂತೆ ಗೌರವ ಧನ ಹೆಚ್ಚಿಸದೆ ವಂಚಿಸುತ್ತಿದೆ.
ಪ್ರಣಾಳಿಕೆಯಲ್ಲಿ ಮಾತುಕೊಟ್ಟಂತೆ ಸರ್ಕಾರ ನಡೆದುಕೊಳ್ಳಬೇಕು.
ಇಲ್ಲದೆ ಹೋದರೆ ನಮ್ಮ ಹೋರಾಟ ನಿರಂತರವಾಗಿ
ಮುಂದುವರೆಯುತ್ತದೆ. ಎಲ್ಲಾ ರಾಜ್ಯಗಳಲ್ಲಿ ಗೌರವ ಧನ
ಹೆಚ್ಚಸಿದ್ದಾರೆ. ಆದರೆ ನಮ್ಮಲ್ಲಿ ಮಾತ್ರ ಹೆಚ್ಚಳವಾಗಿಲ್ಲ ಎಂದು
ಕಾರ್ಯಕರ್ತೆಯರು ಕಿಡಿಕಾರಿದರು.

