ಚಳ್ಳಕೆರೆ :
ಚಿತ್ರದುರ್ಗ: ಬಸ್ ಮಾಲೀಕನ ವಿರುದ್ಧ ದೂರುನೀಡಿದ
ಪ್ರಯಾಣಿಕರು
ಬೆಂಗಳೂರಿನಿಂದ ಚಿತ್ರದುರ್ಗದವರೆಗೂ ದಾರಿಯುದ್ದಕ್ಕೂ
ಕೆಟ್ಟು ನಿಂತ ಬಸ್ ನ ಮಾಲೀಕ ಬದಲಿ ವ್ಯವಸ್ಥೆ ಮಾಡದೆ ಹಣ
ವಂಚಿಸಿದ್ದಾನೆಂದು ಆರೋಪಿಸಿ, ಬಸ್ ಪ್ರಯಾಣಿಕರು ಚಿತ್ರದುರ್ಗದ
ಕೋಟೆ ಠಾಣೆಯಲ್ಲಿ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ.
ಬಸ್
ನಲ್ಲಿ ವೃದ್ಧರು ಮಕ್ಕಳು ರೋಗಿಗಳಿದ್ದು, ಊರು ತಲುಪಲಾಗುತ್ತಿಲ್ಲ.
ದೂರವಾಣಿ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ಹಣ ವಾಪಾಸ್ಸು
ಕೊಡದೆ ವಂಚಿಸುತ್ತಿದ್ದಾರೆ. ಆದ್ದರಿಂದ ದೂರು ನೀಡಿದ್ದೇವೆಂದು
ಪ್ರಯಾಣಿಕ ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ.

